ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸುತ್ತಿದ್ದಂತೆ, ಧೋನಿ ಫೇರ್‍ವೆಲ್ ಪಂದ್ಯದ ಬಗ್ಗೆ ಅನೇಕ ಚರ್ಚೆಗಳು ಎದುರಾಗಿದ್ದವು. ಆದರೆ ಧೋನಿಗಾಗಿ ಯಾವುದೇ ಫೇರ್‍ವೆಲ್ ಪಂದ್ಯ ಆಯೋಜಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಐಪಿಎಲ್ ಚೇರ್‍ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
ಧೋನಿ ನಿವೃತ್ತಿ ಆದ ಸುದ್ದಿ ಹೊರಬೀಳುತ್ತಿದ್ದಂತೆ, ಜಾರ್ಖಂಡ್‍ನಲ್ಲೇ ಧೋನಿಗಾಗಿ ವಿದಾಯ ಪಂದ್ಯವನ್ನು ಆಯೋಜಿಸಬೇಕು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರನ್ ಬಿಸಿಸಿಐ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿರುವ ರಾಜೀವ್ ಶುಕ್ಲಾ, ಧೋನಿ ವಿದಾಯ ಪಂದ್ಯ ಆಡಬೇಕೆಂದು ಬಿಸಿಸಿಐ ಬಳಿ ಕೇಳಿಕೊಳ್ಳದೇ ಇರುವುದರಿಂದ, ವಿದಾಯ ಪಂದ್ಯ ಆಯೋಜಿಸುವುದಿಲ್ಲ ಎಂದಿದ್ದಾರೆ.
ಈ ಹಿಂದೆ ಸೆಹ್ವಾಗ್, ಸಚಿನ್, ದ್ರಾವಿಡ್, ಲಕ್ಷ್ಮಣ್ ಅಂತಹ ದಿಗ್ಗಜರು ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದಾಗಲೂ ಬಿಸಿಸಿಐ ವಿದಾಯ ಪಂದ್ಯದ ಯಾವುದೇ ಚಿಂತನೆ ನಡೆಸಿರಲಿಲ್ಲ. ಈಗ ಹೀಗೆ ಹೇಳಿಕೆ ನೀಡುವ ಮೂಲಕ ಧೋನಿ ವಿದಾಯ ಪಂದ್ಯದ ಆಯೋಜನೆಗೂ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಬಹುತೇಕ ಸ್ಪಷ್ಟವಾದಂತಾಗಿದೆ.