ಶತಕದ ಗೋಲ್‌ ಬಾರಿಸಿದ ರೊನಾಲ್ಡೋ

Spread the love

ಬೆಂಗಳೂರು: ಸ್ವೀಡನ್‌  ವಿರುದ್ಧ ನಡೆದ ಯುಇಎಫ್‌ಎ ನೇಷನ್ಸ್‌ ಲೀಗ್‌ನಲ್ಲಿ ತಮ್ಮ ಕ್ರೀಡಾ ಜೀವನದ 100ನೇ ಗೋಲ್‌ ಹೊಡೆದ  ಹಿರಿಮೆಗೆ ಕ್ರಿಶ್ಚಿಯಾನೋ ರೊನಾಲ್ಡೋ ಪಾತ್ರರಾಗಿದ್ದು, ಪ್ರಪಂಚದಲ್ಲೇ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋರ್ಚುಗಲ್‌ ಫುಟ್ಬಾಲ್‌ ತಂಡವನ್ನು ಪ್ರತಿನಿಧಿಸುವ ಕ್ರಿಶ್ಚಿಯಾನೋ ರೊನಾಲ್ಡೋ, ತಮ್ಮ 165ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇರಾನ್‌ನ ಫುಟ್ಬಾಲ್‌ ಆಟಗಾರ ಅಲಿ ಡಾಯಿ 109  ಗೋಲುಗಳನ್ನು ಹೊಡೆದು ವಿಶ್ವಶ್ರೇಷ್ಠ ಎನಿಸಿದ್ದರೆ, ಕೇವಲ 9 ಗೋಲುಗಳಷ್ಟು ಹಿಂದಿರುವ ರೊನಾಲ್ಡೋ, ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಹ್ಯಾಟ್ರಿಕ್‌ ಗೋಲುಗಳನ್ನೂ ಬಾರಿಸಿದ ಹೆಗ್ಗಳಿಕೆಗೂ ಈಗಾಗಲೇ ಪಾತ್ರರಾಗಿದ್ದಾರೆ.

ಭಾರತದ ಸುನಿಲ್‌ ಚೇತ್ರಿ (72) ಹಾಗೂ ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿ (70) ನಂತರದ ಸ್ಥಾನಗಳಲ್ಲಿದ್ದು, ಸದ್ಯ ಯಾರೂ ರೋನಾಲ್ಡೋ ದಾಖಲೆಯ ಸನಿಹದಲ್ಲಿಲ್ಲ. ಇನ್ನು ಮಹಿಳಾ ವಿಭಾಗದಲ್ಲಿ 17 ಜನರು ಈಗಾಗಲೇ 100 ಗೋಲು ಹೊಡೆದ ಸಾಧನೆ ಮಾಡಿದ್ದು, ಕೆನಡಾದ ಕ್ರಿಸ್ಟೈನ್‌ ಸಿಂಕ್ಲೇರ್‌ 186 ಗೋಲ್‌ ಹೊಡೆದಿದ್ದಾರೆ.


Spread the love

Leave a Reply

Your email address will not be published. Required fields are marked *