ನವದೆಹಲಿ: ಕೀಪಿಂಗ್‍ನಲ್ಲಿ ಧೋನಿ ಪಿಕ್ ಜೇಬುಗಳ್ಳರಿಗಿಂತ ಹೆಚ್ಚು ಚಾಲಾಕಿ ಎಂದು ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ವಿಶ್ವಕಂಡ ಶ್ರೇಷ್ಠ ವಿಕೆಟ್‍ಕೀಪರ್ ಬ್ಯಾಟ್ಸ್‍ಮನಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಹಲವು ಗಣ್ಯರು ಧೋನಿ ಬಗ್ಗೆ ತಮ್ಮ ಮನದಾಳವನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರವಿಶಾಸ್ತ್ರಿ, ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಅವರು ಕ್ರಿಕೆಟ್‍ನ ಎಲ್ಲ ಫಾರ್ಮಾಟ್‍ಗಳಲ್ಲಿ ಮಾಡಿರುವ ಸಾಧನೆ ಗಮನಾರ್ಹವದುದು ಎಂದಿದ್ದಾರೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಸ್ಟಂಪಿಂಗ್ ಮಾಡುವಾಗ ಧೋನಿಯ ಕೈ ಯಾವುದೇ ಪಿಕ್‍ಪಾಕೆಟರ್‍ಗಳಿಗಿಂತಲೂ ಹೆಚ್ಚು ಕಾರ್ಯೋನ್ಮುಖವಾಗುತ್ತದೆ. ಸ್ಟಂಪಿಂಗ್ ಹಾಗೂ ರನೌಟ್ ಮಾಡುವಲ್ಲಿ ಧೋನಿಯನ್ನು ಮೀರಿಸಿದ ಕೈಚಳಕ ತೋರಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.