ನವದೆಹಲಿ: ಟ್ರೆಂಡ್ ಆಗುತ್ತಿರುವ ವಿಷಯಗಳಿಗೆ ಹೆಚ್ಚು ಮಾಹಿತಿ ಸೇರಿಸಲು ನಿರ್ಧರಿಸಿದ ಕೆಲವೇ ದಿನಗಳಲ್ಲಿ ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್ ಇರುವ ವಿಚಾರಗಳಿಗೆ ಶೀರ್ಷಿಕೆ ಹಾಗೂ ವಿವರಣೆಯ ಆಪ್ಶನ್ ನೀಡಲು ಟ್ವಿಟ್ಟರ್ ತೀರ್ಮಾನಿಸಿದೆ.
ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿರುವ ಸಂಸ್ಥೆ, ಹೆಚ್ಚು ಟ್ರೆಂಡ್ ಅಪ್‌ಟೇಟ್ಸ್‌ಗಳು, ಹೆಚ್ಚು ವಿವರಣೆಗಳು, ಹಾಗೂ ಶೀರ್ಷಿಕೆಗಳ ಮೂಲಕ ಯಾಕೆ ಈ ವಿಚಾರಗಳು ಟ್ರೆಂಡ್ ಆಗುತ್ತಿದೆ ಎನ್ನುವುದನ್ನು ನಾವು ನಿಮಗೆ ತಿಳಿಸಲಿದ್ದೇವೆ ಎಂದಿದೆ.
ಈ ಹೊಸ ವೈಶಿಷ್ಟ್ಯದಿಂದಾಗಿ ನೆಟ್ಟಿಗರಿಗೆ ಹೆಚ್ಚಿನ ಮಾಹಿತಿ ಟ್ವಿಟ್ಟರ್‌ನಲ್ಲಿಯೇ ದೊರಕಲಿದ್ದು, ಯಾವುದೇ ವಿಚಾರದ ಮೂಲ ಶೋಧನೆಗೆ ಹೆಚ್ಚು ಪ್ರಯಾಸ ಪಡಬೇಕಿಲ್ಲ ಎಂದು ಟ್ವಿಟ್ಟರ್ ಹೇಳಿದೆ. ಈಗಾಗಲೇ ಈ ವೈಶಿಷ್ಟ್ಯವನ್ನು ಟ್ವೀಟಿಗರಿಗೆ ಪರಿಚಯಿಸಲಾಗಿದೆ.