ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

Spread the love

ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ವೈಖರಿ ವಿಶಿಷ್ಟತೆಯ ಆಗರ. ಈ ಕೌಶಲ್ಯಗಳನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ನ ಆ‌ನ್ ಲೈನ್ ತರಬೇತಿ ಆರಂಭಿಸಿದೆ.

ಚುನಾವಣೆ ಸನಿಹವಾಗುತ್ತಿರುವ ಇಂದಿನ ದಿನಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಹಾಗೂ ಕಾರ್ಯತಂತ್ರದ ರೂಪಿಸುವಿಕೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಪ್ರಧಾನ ಪಾತ್ರ ವಹಿಸಲಿದೆ. 2023 ರ ವಿಧಾನಸಭಾ
ಚುನಾವಣೆ ಬಹುತೇಕ ಆನ್ ಲೈನ್ ಮುಖಾಂತರವೇ ಪ್ರಚಾರಕ್ಕೆ ಬರಲಿದೆ ಎನ್ನುವುದು ಅನೇಕ ಸಂಶೋಧನೆಗಳ ತಾತ್ಪರ್ಯ. ಹಾಗಾಗಿ ಈ ದಿಸೆಯ ಪ್ರಯತ್ನವನ್ನು ಕೆಐಪಿಎಲ್ ಆರಂಭಿಸಿದ್ದು, ಚುನಾವಣೆಗೆ ಅಗತ್ಯವಾಗುವ ಟೂಲ್ಸ್ ಗಳ ಜತೆಗೆ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ವೆಬ್ ಡಿಸೈನ್ ಸ್ಕಿಲ್ ಗಳನ್ನು ಹೇಳಿಕೊಡಲಿದೆ.

ಇದಕ್ಕೆ ಪೂರಕವಾಗುವಂತೆ ಸರಣಿ ಉಚಿತ ವೆಬಿನಾರ್ ಗಳನ್ನು ಕೂಡಾ ಹಮ್ಮಿಕೊಂಡಿರುವ ಸಂಸ್ಥೆ, ಡಿಜಿಟಲ್ ಮಾರ್ಕೆಟಿಂಗ್ ನ ಅಗತ್ಯತೆ ಹಾಗೂ ಆದಾಯ ಮೂಲಗಳ ಬಗ್ಗೆ ಬೆಳಕು ಚೆಲ್ಲಲು ಚಿಂತನೆ ನಡೆಸಿದೆ. ಡಿ.1 ರಂದು ಮೊದಲ ವೆಬಿನಾರ್ ಬೆಳಿಗ್ಗೆ 11.30 ಕ್ಕೆ ನಡೆಯಲಿದ್ದು, ಡಿ.2ರ ರಾತ್ರಿ 8ಗಂಟೆಗೆ ವೆಬಿನಾರ್ ಗೆ ಸೇರುವ ಇನ್ನೊಂದು ಅವಕಾಶವನ್ನು ಸಂಸ್ಥೆ ತೆರೆದಿಟ್ಟಿದೆ.

ವೆಬಿನಾರ್ ನಲ್ಲಿ ತ್ರಿಭಾಷಾ ಪ್ರಸಿದ್ಧ ನ್ಯೂಸ್ ನೆಕ್ಸ್ಟ್ ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಗುಂಡ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಡಿಜಿಟಲ್ ಮಾರ್ಕೆಟಿಂಗ್ ನ ಆದಾಯ ಮೂಲಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ನಂತರ ಹಿಂದಿನ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಬಗ್ಗೆ ತಿಳಿಸಿಕೊಡಲಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ತರಬೇತಿಯ ಇತರ ಮಾಹಿತಿಗಳು ಹಾಗೂ ದೊರಕಲಿರುವ 5 ಕ್ಕೂ ಹೆಚ್ಚು ಸರ್ಟಿಫಿಕೇಟ್ ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಚಂದನ್ ಕಲಾಹಂಸ ಅವರೇ ನಡೆಸಿಕೊಡಲಿರುವ 21 ದಿನಗಳ ತರಬೇತಿ ಇದೇ ಡಿ.15 ರಿಂದ ಆರಂಭಗೊಳ್ಳಲಿದ್ದು, ಆಯ್ದ ಮೂವರಿಗೆ ಬೆಂಗಳೂರಿನ ಸಂಸ್ಥೆಯಲ್ಲಿ 1 ತಿಂಗಳು ಮನೆಯಿಂದಲೇ ಮಾಡುವ ಇಂಟರ್ನ್ಶಿಪ್ ಸಹ ದೊರಕಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇಂದೇ ಉಚಿತ ವೆಬಿನಾರ್ ಗೆ ನೊಂದಾಯಿಸಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://chat.whatsapp.com/BJsMoD1SGhp7LDeyrNxvDy


Spread the love