ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಸೇರಿದ ಬಂಗಲೆಯ ಒಂದು ಭಾಗವನ್ನು ಮುಂಬೈ ಮಹಾನಗರ ಪಾಲಿಕೆ ಧ್ವಂಸಗೊಳಿಸಿದೆ.
ಅಕ್ರಮವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ ಎಂದು ಅರೋಪಿಸಿರುವ ಮುಂಬೈ ಮಹಾನಗರ ಪಾಲಿಕೆ ಜೆಸಿಬಿ ಮೂಲಕ ತೆರವು ಕಾರ್ಯಕ್ಕೆ ಮುಂದಾಗಿದೆ. ಪರವಾನಗಿಗಿಂತ ಹೆಚ್ಚಿನ ಭಾಗಕ್ಕೆ ಬಂಗಲೆಯನ್ನು ವಿಸ್ತರಿಸಲಾಗಿದೆ ಎಂದು ನಿನ್ನೆ ಕಂಗನಾಗೆ ನೊಟೀಸ್ ನೀಡಲಾಗಿತ್ತು. ಇಂದೇ ಅದರ ತೆರವಿಗೆ ಮುಂದಾಗಿರುವುದು ಮಹಾರಾಷ್ಟ್ರ ಸರ್ಕಾರದ ಕೈವಾಡದ ಬಗ್ಗೆ ಅನುಮಾನ ಮೂಡಿಸಿದೆ.
ಈ ಕುರಿತು ಕಂಗನಾ ಪರ ವಕೀಲರು ಮಾತಾಡಿದ್ದು, ಶಿವಸೇನೆ ವಿರುದ್ಧದ ಕಂಗನಾ ನಿಲುವಿಗಾಗಿ ಮಹಾರಾಷ್ಟ್ರ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ ಎನ್ನುವ ಗುಮಾನಿಯಿದೆ. ಹಾಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನವೇ ತುರ್ತು ಅರ್ಜಿ ವಿಚಾರಣೆಗೆ ಬರಲಿದೆ ಎಂದಿದ್ದಾರೆ