ಟೋಕಿಯೋ : ಮಾರಿಷಸ್‌ನ ಸಮುದ್ರ ಮಧ್ಯದಲ್ಲಿ ನಡೆದ ಹಡಗು ದುರಂತದಲ್ಲಿ ಸಾವಿರ ಟನ್‌ನಷ್ಟು ಆಯಿಲ್, ಸಮುದ್ರ ಪಾಲಾದ್ದಕ್ಕೆ ಸಂಬಂಧಿಸಿ, ಭಾರತ ಮೂಲದ ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ಮಾರಿಷಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಜಪಾನ್‌ನ ಎಮ್.ವಿ ವಕಾಷಿಯೋ ಹಡಗಿನ ಕ್ಯಾಪ್ಟನ್ ಆಗಿದ್ದ ಸುನಿಲ್ ಕುಮಾರ್ ನಂದೇಶ್ವರ್ ಅವರನ್ನು ಹಡಗು ಪ್ರಯಾಣವನ್ನು ಅಸುರಕ್ಷಿಗೊಳಿಸಿದ ಆರೋಪದಡಿ ಬಂಧಿಸಲಾಗಿದೆ. ಜಾಮೀನು ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಸಿವೋ ಕೊದೆನ್ ಹೇಳಿದ್ದಾರೆ.ಇದಕ್ಕೂ ಮುನ್ನ ಹಡಗಿನ ಮೊದಲಿನ ಅಧಿಕಾರಿಯನ್ನೂ ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು.