ಮುಂಬೈ: ಸಂಜಯ್ ರಾವತ್ ಹಾಗೂ ಕಂಗನಾ ರಣಾವತ್ ನಡುವೆ ನಡೆಯುತ್ತಿದ್ದ ವಾಗ್ವಾದ ತಾರಕಕ್ಕೇರಿದೆ. ನಾನು ಇದೇ ಸೆ.9ರಂದು ಮುಂಬೈ ನಗರಕ್ಕೆ ಬರುತ್ತಿದ್ದೇನೆ. ಏನು ಮಾಡುತ್ತೀರೋ ಮಾಡಿ ನೋಡೋಣ ಎಂದು ಕಂಗನಾ ರಣಾವತ್ ಸಂಜಯ್ ರಾವತ್ ಬಳಗಕ್ಕೆ ಸವಾಲು ಹಾಕಿದ್ದಾರೆ.
ರಾವತ್ ಅವರು ನನ್ನನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ನಾನು ಒಂದೊಮ್ಮೆ ರಾವತ್ ಹಾಗೂ ಮುಂಬೈ ಪೊಲೀಸರನ್ನು ನಿಂದಿಸಿದ್ದೇನೆ ಎಂದ ಮಾತ್ರಕ್ಕೆ ಮಹಾರಾಷ್ಟ್ರವನ್ನು ನಿಂದಿಸಿದಂತಲ್ಲ. ರಾವತ್ ಅವರ ಜನಗಳು ನನ್ನನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ಸೆ.9ಕ್ಕೆ ಮುಂಬೈ ನಗರಿಗೆ ಬಂದೇ ಬರುತ್ತೇನೆ ಎಂದಿದ್ದಾರೆ.
ಆಮಿರ್ ಖಾನ್ ಈ ದೇಶದಲ್ಲಿ ಭಯವಾಗುತ್ತದೆ ಎಂದಾಗ ಯಾರೂ ಏನೂ ಹೇಳಲಿಲ್ಲ. ನಸ್ರುದ್ದೀನ್ ಷಾ ಭಾರತದ ಬಗ್ಗೆ ತುಚ್ಛ ಮಾತಾಡಿದಾಗ ಯಾರೂ ಏನನ್ನೂ ಹೇಳಲಿಲ್ಲ. ಈ ದೇಶದ ಮಹಿಳೆಯರಿಗೆ ಶೋಷಣೆಯಾಗುವಾಗ ಯಾರೂ ಮಾತಾಡಲಿಲ್ಲ. ಆದರೆ ನಾನು ಮಾತಾಡಿದರೆ ನನ್ನನ್ನು ಹತ್ತಿಕ್ಕಲು ಯತ್ನಿಸುತ್ತಾರೆ. ದೇಶಕ್ಕಾಗಿ ದುಡಿದ, ನುಡಿದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನಾನೂ ಕೂಡ ಅವರಂತೆಯೇ ಸಾಯಲು ಸಿದ್ಧನಿದ್ದೇನೆ ಎಂದಿದ್ದಾರೆ.
ಮೊದಲಿಗೆ ಕಂಗನಾ ಹಾಗೂ ಸಂಜಯ್ ನಡುವೆಶಿವಸೇನೆ ಹಾಗೂ ಮುಂಬೈ ವಿಚಾರದಲ್ಲಿ ವಾಗ್ವಾದ ಆರಂಭವಾಗಿತ್ತು. ಈಗ ಅದು ವೈಯಕ್ತಿಕ ಮಟ್ಟಕ್ಕೆ ಮುಟ್ಟಿದ್ದು, ಸಂಜಯ್ ಕಂಗನಾಗೆ ಮುಂಬೈಗೆ ಮತತೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಲ್ಲದೆ, ಹರಾಮ್‌ಕೋರ್ ಎಂಬ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಕಂಗನಾ ಈ ಬಗೆಯ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.
Sanjay Raut ji, you called me 'haramkhor.' It shows your mindset…If I criticise Mumbai Police or if I criticise you, then you can't say I am insulting Maharashtra. You aren't Maharashtra. Your people are threatening me, still I'll come to Mumbai on Sept 9: Kangana Ranaut pic.twitter.com/m6o8KH1VNX
— ANI (@ANI) September 6, 2020