ನವದೆಹಲಿ: ಕೋಮಾ ಸ್ಥಿತಿಯಲ್ಲಿಯೇ ಮುಂದುವರಿದಿರುವ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ, ಮತ್ತಷ್ಟು ಕ್ಷೀಣವಾಗಿದ್ದು, ಸುಧಾರಣೆ ಕಾಣುತ್ತಿಲ್ಲ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರನ್ನು ಕಳೆದ 20 ದಿನಗಳ ಹಿಂದೆ ದಾಖಲು ಮಾಡಲಾಗಿತ್ತು.
ಶ್ವಾಸಕೋಶದ ಸೋಂಕಿನಿಂದಾಗಿ ಪ್ರಣವ್ ಮುಖರ್ಜಿಯವರು ಸೆಪ್ಟಿಕ್ ಆಘಾತದಲ್ಲಿದ್ದಾರೆ. ಭಾನುವಾರದಿಂದಲೂ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರಲಿಲ್ಲ. ಜೊತೆಗೆ ಕ್ಷೀಣಿಸುತ್ತಿದೆ. ಅವರಿಗೆ ಶ್ವಾಸಕೋಶ ಸೋಂಕು ಕಡಿಮೆಯಾಗುತ್ತಿಲ್ಲ. ತಜ್ಞ ವೈದ್ಯಕೀಯ ತಂಡ ತೀವ್ರ ನಿಗಾವಹಿಸಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯು ತಿಳಿಸಿದೆ.
84 ವರ್ಷದ ಮುಖರ್ಜಿ ಅವರ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣದಿಂದಾಗಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಕಂಟೋನ್ಮೆಂಟ್ನ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.