ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ನಷ್ಟ ಉಂಟಾದ ಕಾರಣ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಓಲಾ – ಉಬರ್ ಕಾರು ಚಾಲಕರು ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ದೇಶದ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತ ಓಲಾ ಮತ್ತು ಉಬರ್ ಕಾರು ಚಲಾಯಿಸುವ ಸುಮಾರು 2 ಲಕ್ಷ ಚಾಲಕರು, ಸಾಲ ಮರುಪಾವತಿಗೆ ಇದ್ದ ತಾತ್ಕಾಲಿಕ ತಡೆ ಅವಧಿಯನ್ನು ವಿಸ್ತರಿಸುವಂತೆ ಮತ್ತು ಕೋವಿಡ್ -19 ದೃಷ್ಟಿಯಿಂದ ಪ್ರಯಾಣ ದರ ಹೆಚ್ಚಿಸುವಂತೆ ಹೇಳಿದ್ದಾರೆ.
ಓಲಾ-ಉಬರ್ ಚಾಲಕರ ಒಕ್ಕೂಟಗಳಲ್ಲಿ ಒಂದಾದ ದೆಹಲಿಯ ಸರ್ವೋದಯ ಚಾಲಕರ ಸಂಘದ ಅಧ್ಯಕ್ಷ ಕಮಲ್ ಜೀತ್ ಸಿಂಗ್ ಗಿಲ್ ಅವರು, ಚಾಲಕರ ಮನವಿಗಳಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.