ರಶ್ಮಿಕಾ ಮಂದಣ್ಣ (Rashmika Mandanna) ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಯಾರೂ ಊಹಿಸದಂತಹ ಜನಪ್ರಿಯತೆಯನ್ನು ಅವರು ಸಾಧಿಸಿದರು. ಕನ್ನಡದಲ್ಲಿ ಕಿರಿಕ್ ಪಾರ್ಟಿ( Kirik Party ) ಯಿಂದ ಶುರುವಾದ ಅವರ ಪಯಣ ಇದೀಗ ಬಾಲಿವುಡ್‌ಗೂ ವಿಸ್ತರಿಸಿದೆ. ಬಾಲಿವುಡ್‌ನಲ್ಲೂ ಬೇಡಿಕೆ ಇದೆ. ದಕ್ಷಿಣದ ಹಲವು ಸ್ಟಾರ್ ನಟರ ಜತೆ ತೆರೆಹಂಚಿಕೊಂಡ ಹೆಮ್ಮೆ ಅವರದ್ದು. ರಶ್ಮಿಕಾ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಹುಟ್ಟುಹಬ್ಬದ ಶುಭಾಶಯಗಳು ಬರುತ್ತಿವೆ.
ರಶ್ಮಿಕಾ ಮಂದಣ್ಣ ಅವರು 5 ಏಪ್ರಿಲ್ 1996 ರಂದು ಜನಿಸಿದರು. ಅವರಿಗೆ ಈಗಿನ್ನೂ 26ರ ಹರೆಯ. ಚಿತ್ರರಂಗಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 20 ವರ್ಷ. ಆರು ವರ್ಷಗಳ ಅವರ ಜೀವನದಲ್ಲಿ ಬಹಳಷ್ಟು ಬದಲಾಗಿದೆ. 2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದಿಂದ ರಶ್ಮಿಕಾ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಪುನೀತ್ ರಾಜ್ಕುಮಾರ್( Puneeth Rajkumar), ಗಣೇಶ್( Ganesh ) ಜತೆ ತೆರೆಹಂಚಿಕೊಂಡರು. ಇದೇ ಸಮಯದಲ್ಲಿ ಅವರಿಗೆ ತೆಲುಗಿನಿಂದ ಆಫರ್ ಬಂತು. ‘ಚಲೋ’ ಚಿತ್ರದಿಂದ ಅವರಿಗೆ ಟಾಲಿವುಡ್ನಲ್ಲೂ ಬೇಡಿಕೆ ಹೆಚ್ಚಿತು. ಇದಾದ ಬಳಿಕ ತೆರೆಗೆ ಬಂದಿದ್ದು ‘ಗೀತ ಗೋವಿಂದಂ’ (Geetha Govindam ) ಸಿನಿಮಾ. ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರದಿಂದ ರಶ್ಮಿಕಾ ( Rashmika ) ಲಕ್ ಸಂಪೂರ್ಣ ಬದಲಾಯಿತು. ಅವರ ವೃತ್ತಿ ಜೀವನವನ್ನು ಈ ಸಿನಿಮಾ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.
ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಪುಷ್ಪ( Pushpa) ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ ರಶ್ಮಿಕಾ ‘ಮಿಷನ್ ಮಜ್ನು’, ‘ಗುಡ್ ಬೈ’ ಮತ್ತು ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ರಶ್ಮಿಕಾ ಅವರ ಹುಟ್ಟುಹಬ್ಬಕ್ಕೆ( Rashmika Mandanna Birthday) ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ . ರಶ್ಮಿಕಾ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇವತ್ತು ಅವರ ಹೊಸ ಸಿನಿಮಾ ಅನೌನ್ಸ್ ಆಗುತ್ತಾ ಅಥವಾ ಇಲ್ಲವೋ ಕಾದು ನೋಡಬೇಕು.