ನವದೆಹಲಿ: ಪ್ರಧಾನಿ ಮೋದಿ ಓಣಂನ ಶುಭಾಶಯವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಸೌಹಾರ್ದತೆ ಕಾಯುವ ವಿಶಿಷ್ಟ ಹಬ್ಬ ಓಣಂ ಎಂದು ಮೋದಿ ಹೊಗಳಿದ್ದಾರೆ.
ಓಣಂ ಎನ್ನುವುದು ವಿಶಿಷ್ಟ ಹಬ್ಬವಾಗಿದ್ದು, ರೈತರಿಗೆ ನಮ್ಮ ಕೃತಜ್ಙತೆ ತಿಳಿಸುವ ಸುದಿನವಾಗಿದೆ. ಈ ಹಬ್ಬವು ಎಲ್ಲರಿಗೂ ಆರೋಗ್ಯ, ಭಾಗ್ಯವನ್ನು ಕೊಟ್ಟು ಸುಖವಾಗಿಡಲಿ ಎಂದು ಮನ್ ಕೀ ಬಾತ್ ನ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡುವ ಮೂಲಕ ಮೋದಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಲಯಾಳಂನಲ್ಲೇ ಟ್ವೀಟ್ ಮಾಡಿರುವ ಮೋದಿ, ಓಣಂ ಎನ್ನುವುದು ಇತ್ತೀಚೆಗೆ ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಚಿಂಗಮ್ ತಿಂಗಳು ಹೇಗೆ ಆರಂಭವೋ ಹಾಗೆಯೇ ಈ ಹಬ್ಬ ನಮ್ಮ ಜಾಗತಿಕ ಆರ್ಥಕತೆಗೆ ನಾಂದಿಯಾಗಲಿ ಎಂದು ಮೋದಿ ಆಶಿಸಿದ್ದಾರೆ.
ಆ.೨೨ರಿಂದ ಆರಂಭವಾಗಿರುವ ಓಣಂ ಆಚರಣೆ ಸೆ.೨ರವರೆಗೂ ಮುಂದುವರಿಯಲಿದ್ದು, ಮಲಯಾಳಿ ಕ್ಯಾಲೆಂಡರ್ ಪ್ರಕಾರ ಚಿಂಗಮ್ ಮೊದಲ ತಿಂಗಳಾಗಿರಲಿದೆ. ೧೦ ದಿನಗಳ ಕಾಲ ನಡೆಯುವ ಈ ಆಚರಣೆ ತಿರುಓಣಂ ಮೂಲಕ ಕೊನೆಗಾಣಲಿದೆ.
എല്ലാ മലയാളികൾക്കും ഹൃദയം നിറഞ്ഞ ഓണാശംസകൾ നേരുന്നു. ഓണം സൗഹാർദത്തിന്റെയും ഐക്യത്തിന്റെയും ആഘോഷമാണ്. കഠിനാധ്വാനികളായ നമ്മുടെ കർഷകരോട് നന്ദി പ്രകടിപ്പിക്കാനുള്ള ഒരു അവസരം കൂടിയാണ് ഈ ഉത്സവം. ഈ ഓണക്കാലത്ത് എല്ലാവർക്കും ആയുരാരോഗ്യസൗഖ്യവും സന്തോഷവും നേരുന്നു.
— Narendra Modi (@narendramodi) August 31, 2020