ನವದೆಹಲಿ: ಬಹಳ ದಿವಸಗಳಿಂದ ಹಳೆಯ ಬೈಕ್‌ಗಳಲ್ಲೇ ಮಾಡಿಫಿಕೇಶನ್ ಮಾಡುತ್ತಾ ಬಂದಿದ್ದ ಹೊಂಡಾ ಸಂಸ್ಥೆ ಕೊನೆಗೂ ಹೊಂಡಾ ಹಾರ್ನೆಟ್ ಬೈಕ್‌ನ ನೂತನ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾರ್ನೆಟ್ 2.0 ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಫಸ್ಟ್ ಲುಕ್‌ನಲ್ಲೇ ಬೈಕ್‌ಪ್ರಿಯರ ಮನಗೆದ್ದಿದೆ.
ಸದ್ಯ ಭಾರತದಲ್ಲಿ ನೀಲಿ ಬಣ್ಣದ ಬೈಕ್ ಮಾತ್ರ ಪರಿಚಯಿಸಲಾಗಿದ್ದು,180 ರಿಂದ 200 ಸಿಸಿ ಬೈಕ್‌ಗಳ ಮಧ್ಯೆ ಪೈಪೋಟಿ ನೀಡುವಂತೆ ಬೈಕ್ ತಯಾರಾಗಿದೆ. 17.03 ಹಾರ್ಸ್ ಪವರ್ ಶಕ್ತಿ ಹೊಂದಿರುವ ಬೈಕ್, 184 ಸಿಸಿ ಇಂಜಿನ್ ಹೊಂದಿದೆ. ಹಿಂದಿನ ಹಾರ್ನೆಟ್ 160 ಸಿಸಿಯಲ್ಲಿದ್ದಂತೆಯೇ 5 ಗೇರ್ ಸೌಲಭ್ಯ ಹೊಂದಿರುವ ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸಹ ಇರಲಿದೆ.
160ಸಿಸಿ ಹಾರ್ನೆಟ್‌ನ್ನೇ ಮಾಡಿಫೈ ಮಾಡಿರುವ ಬೈಕ್ ಈಗ ಯಮಹಾ ಹಾಗೂ ಪಲ್ಸರ್ 200 ನ ಮಿಶ್ರಿತ ಶೈಲಿಯಲ್ಲಿ ವಿನ್ಯಾಸಗೊಂಡಿದ್ದು, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಇಂಜಿನ್‌ನೊಂದಿಗೆ 142 ಕೆಜಿ ತೂಕ ಹೊಂದಿರಲಿದೆ.
ಹಿಂದಿನಂತೆಯೇ ಎಲ್‌ಸಿಡಿ ಡಿಸ್ಪ್ಲೈ, ಹಜಾರ್ಡ್ ಲೈಟ್ ಹಾಗೂ ಎಕ್ಸ್ ಶೇಪ್ ಟೈಲ್ ಲ್ಯಾಂಪ್ ಬೈಕ್‌ನ ಅಂದ ಹೆಚ್ಚಿಸಲಿದ್ದು, ಎಲ್‌ಸಿಡಿ ಡಿಸ್‌ಪ್ಲೇ ಗೆ
ನೀಲಿ ಬಣ್ಣವನ್ನೇ ಹೊಂದಿಸಲಾಗಿದೆ. ಸದ್ಯ ಭಾರತದಲ್ಲಿ ಇದರ ಬೆಲೆ ರೂ.1,28,056 ಇರಲಿದ್ದು, 35ರಿಂದ 40 ಕಿ.ಮೀ ಮೈಲೇಜ್ ನಿರೀಕ್ಷಿಸಲಾಗಿದೆ.