ಸಿಡ್ನಿ : ಗಂಟೆಗೆ 70 ಕಿ.ಮೀ ವೇಗದಲ್ಲಿ ಬೀಸಿದ ಗಾಳಿ ಕೆಳಗೆ ಬೀಳುತ್ತಿದ್ದ ಜಲಪಾತದ ನೀರನ್ನು ಮೇಲಕ್ಕೆ ಹಾರಿಸಿಕೊಂಡು ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸಿಡ್ನಿಯ ರಾಯಲ್ ನ್ಯಾಷನಲ್ ಪಾರ್ಕ್ ಸಮೀಪದ ಜಲಪಾತದಲ್ಲಿ ಕೆಳಗೆ ಧುಮ್ಮುಕ್ಕುತ್ತಿದ್ದ ನೀರನ್ನು ರಭಸವಾಗಿ ಬೀಸಿದ ಗಾಳಿ ಹಾರಿಸಿದ್ದು ಮೇಲ್ಮುಖವಾಗಿ ನೀರು ಚಿಮ್ಮುವಂತೆ ಮಾಡಿದೆ. ಘಟನೆಯಿಂದ ರೋಮಾಂಚಿತಗೊಂಡ ಅನೇಕರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೀರು ಗಾಳಿಯ ಜತೆಯಲ್ಲಿ ಕಾಮನಬಿಲ್ಲು ಸಹ ಕಾಣಿಸಿಕೊಂಡಿದ್ದು ಘಟನೆಗೆ ಇನ್ನಷ್ಟು ಮೆರಗು ನೀಡಿದೆ. ಸಿಡ್ನಿಯ ನ್ಯೂಸ್ ಚಾನೆಲ್ ಇದನ್ನು ಬಿಡುಗಡೆಗೊಳಿಸಿದ್ದು ವೈರಲ್ ಆಗಿದೆ.
ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ