ನವದೆಹಲಿ: ಸೆ. 15ರಿಂದ 26ರವರೆಗೆ ದಕ್ಷಿಣ ರಷ್ಯಾದ ಅಸ್ತ್ರಾಖಾನ್ ಪ್ರದೇಶದಲ್ಲಿ ಕವ್ಕಾಜ್-2020 ಬಹು ರಾಷ್ಟ್ರ ಸೇನಾ ಕವಾಯತು ನಡೆಯಲಿದ್ದು, ಈ ಜಂಟಿ ಸಮರಾಭ್ಯಾಸದಲ್ಲಿ, ಭಾಗವಹಿಸದಿರಲು ಭಾರತ ನಿರ್ಣಯಿಸಿದೆ.
ಈ ಜಂಟಿ ಮಿಲಿಟರಿ ಕವಾಯತ್ತಿನಲ್ಲಿ ಪಾಕಿಸ್ತಾನ ಹಾಗೂ ಚೀನಾ ಸೇನೆಗಳೂ ಭಾಗವಹಿಸಲಿದ್ದು, ಈ ಎರಡೂ ರಾಷ್ಟ್ರಗಳ ಜೊತೆಗಿನ ರಾಜತಾಂತ್ರಿಕ ಸಂಬಂಧ ಚೆನ್ನಾಗಿಲ್ಲದ ಕಾರಣ ಕವ್ಕಾಜ್‌ನಲ್ಲಿ ಭಾಗವಹಿಸದಿರಲು ಭಾರತ ನಿರ್ಣಯಿಸಿದೆ.
ಇಷ್ಟೇ ಅಲ್ಲದೇ ಕೊರೊನಾ ವೈರಸ್ ಹಾವಳಿಯನ್ನೂ ಗಮನದಲ್ಲಿಟ್ಟುಕೊಂಡು ಕವ್ಕಾಜ್-2020 ಅಂತಾರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸದಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿದೆ ಎನ್ನಲಾಗಿದೆ.