ಬೆಂಗಳೂರು : ಕೆಲಸ ಮಾಡಲು ಕಷ್ಟವಾಗುವ ಹಾಗೂ ಕೆಲಸ ಮಾಡಲು ನಿಧಾನಿಸುವ ಅನೇಕ ಕಂಪ್ಯೂಟರ್‌ಗಳು ನಮ್ಮ ಸ್ವತ್ತುಗಳು. ಹಾಗೆಂದು ಅವನ್ನು ಕಸದ ಬುಟ್ಟಿಗೆ ಹಾಕಲು ಬಂದೀತೇ? ಕಷ್ಟವಾಗಲಿ, ನಷ್ಟವಾಗಲಿ, ಇಷ್ಟವಾಗದ ಕೆಲಸವಾದರೂ ಮಾಡಲೇಬೇಕಲ್ಲವೇ? ಹಾಗಾದರೆ ಈ ಲ್ಯಾಪ್‌ಟಾಪ್ ಅಥವಾ ನೀವು ಬಳಸುವ ಕಂಪ್ಯೂಟರಗಳು ನಿಧಾನವಾದರೆ ಸರಿಪಡಿಸಲು ಅನೇಕ ವಿಧಾನಗಳಿವೆ. ಈ ವಿಧಾನಗಳನ್ನು ಬಳಸಿದರೆ ನಿಮ್ಮ ಕಂಪ್ಯೂಟರ ಹ್ಯಾಂಗ್ ಆಗುವುದನ್ನು ತಪ್ಪಿಸಬಹುದಾಗಿದೆ.
ಯಾಕಾಗಿ ಹ್ಯಾಂಗ್ ಆಗುತ್ತೆ ಕಂಪ್ಯೂಟರ್?
ಕೆಲವೊಮ್ಮೆ ಗೊತ್ತಾಗದೇ ಕೆಲವು ಅನ್‌ನೌನ್ ಸೋರ್ಸ್‌ಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು, ಕೆಲವು ಅಪ್‌ಡೇಟ್‌ಗಳನ್ನ ಮಾಡುವುದು, ರ್ಯಾಮ್ ಇಲ್ಲದಿರುವುದು, ಲ್ಯಾಪ್‌ಟಾಪ್ ದುರಸ್ಥಿಯಾಗಿರುವುದು ಇನ್ನಿತರ ಕಾಋಣಗಳಿಂದ ಲ್ಯಾಪ್‌ಟಾಪ್ ಆಗಾಗ್ಗೆಕೈ ಕೊಡುತ್ತಿರುತ್ತದೆ.
ಪರಿಹಾರ ಮಾರ್ಗಗಳು…
*ಯಾವುದಾದರೂ ಒಂದು ಯಾಂಟಿ ವೈರಸ್‌ಸಾಫ್ಟ್‌ವೇರ್‌ನ್ನು ನಿಮ್ಮ ಸಿಸ್ಟಮ್‌ನಲ್ಲಿ ಇರಿಸಿಕೊಳ್ಳುವುದು ಸೂಕ್ತ(ುದಾ: ಅವೈರಾ)
*ಟ್ರಬಲ್ ಶೂಟ್ ಮಾಡುವುದರಿಂದ ಕೆಲವು ಬಾರಿ ಮಾತ್ರ ಸಮಸ್ಯೆಗಳು ಪರಿಹಾರವಾಗುತ್ತದೆ. ಇನ್ನು ಕೆಲವೊಮ್ಮೆ ಟಾಸ್ಕ್ ಮ್ಯಾನೇಜರ್‌ನಲ್ಲಿ ಕ್ಲೋಸ್ ಮಾಡಿದರೂ ಈ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಇವರೆಡಕ್ಕೂ ಸಮಯ ಬೇಕಾಗುತ್ತದೆ.
ಏನು ಮಾಡಬೇಕು?
*ಮೊದಲಿಗೆ ವೈ-ಫೈ ಅಥವಾ ವೈರ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದ್ದಲ್ಲಿ ಅದನ್ನು ತೆಗೆದುಬಿಡಿ.
*ಒಂದೊಮ್ಮೆ ಸೇಫ್ ಮೋಡ್‌ನಲ್ಲಿ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದೆ ಎಂದಾದರೆ ಅದು ಸಾಫ್ಟ್‌ವೇರ್ ಪ್ರಾಬ್ಲಂ ಎನ್ನುವುದಾಗಿ ಪರಿಗಣಿಸಿ.
*ಸೇಫ್ ಮೋಡ್‌ಗೆ ಹೋಗಲು, ವಿಂಡೋಸ್ ಲೋಗೋ ಬರುವಾಗ ಶಿಫ್ಟ್ ಕೀ ಡೌನ್ ಒತ್ತಿ. ನಂತರ ಟ್ರಬಲ್‌ಶೂಟ್ ಆಪ್ಶನ್‌ನಲ್ಲಿ ಅಡ್ವಾನ್ಸ್‌ಡ್ ಆಪ್ಶನ್‌ಗೆ ಹೋಗಿ. ಅಲ್ಲಿ ಸ್ಟಾರ್ಟ್‌ಅಪ್ ಸೆಟ್ಟಿಂಗ್ಸ್‌ನಲ್ಲಿ ರೀಸ್ಟಾರ್ಟ್‌ಗೆ ಹೋದರೆ ಸೇಫ್ ಮೋಡ್ ಆಪ್ಶನ್ ತೋರಿಸುತ್ತದೆ. ಇದನ್ನು ಆಯ್ಕೆ ಮಾಡಲು ಎಫ್‌೪ ಕೀ ಒತ್ತಿ. ಈಗ ವಿಂಡೋಸ್ ರೀಬೂಟ್ ಆಗಿ ಸೇಫ್ ಮೋಡ್‌ಗೆ ತೆರಳುತ್ತದೆ.
* ಈಗ ಕಂಟ್ರೋಲ್, ಆಲ್ಟ್, ಡಿಲೀಟ್‌ನ್ನು ಒಟ್ಟಿಗೆ ಒತ್ತುವುದರ ಮೂಲಕ ಟಾಸ್ಕ್ ಮ್ಯಾನೇಜರ್‌ಗೆ ಹೋಗಿ.
*ಇಲ್ಲಿ ನಿಮಗೆ ಯಾವ ಅಪ್ಲಿಕೇಶನ್ ಹೆಚ್ಚು ಮೆಮೊರಿ ತೆಗೆದುಕೊಳ್ಳುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಅಂತಹ ಅಪ್ಲಿಕೇಶನ್‌ನ್ನು ರೈಟ್ ಕ್ಲಿಕ್ ಮಾಡಿದರೆ ಎಂಡ್ ಟಾಸ್ಕ್ ಎನ್ನುವ ಆಪ್ಶನ್ ಬರುತ್ದೆದೆ. ಇದನ್ನು ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ಹೆಚ್ಚು ಕ್ಷಮತೆಯಿಂದ ಕೆಲಸ ಮಾಡುವಂತೆ ಮಾಡಬಹುದು. ಇದರಿಂದ ಯಾವ ಆಪ್ ಡಿಲೀಟ್ ಮಾಡಬೇಕು ಎನ್ನುವುದೂ ನಿಮಗೆ ಅರ್ಥವಾಗುತ್ತದೆ.
ಮುಖ್ಯವಾಗಿ ಯಾವುದೇ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು ಯೋಚನೆ ಮಾಡುತ್ತಾ ಇರಬೇಡಿ. ಯಾಕೆಂದರೆ ಕಂಪ್ಯೂಟರ್ ವರ್ಕ್ ಆದರೆ ಮಾತರ ಅಪ್ಲಿಕೇಶನ್ಸ್. ಹಾಗೆಯೇ ಡೆಸ್ಕ್‌ಟಾಪ್‌ನಲ್ಲಿ ಎಲ್ಲವನ್ನೂ ತುಂಬಿಸಯೂ ಇಡಬೇಡಿ. ಇದು ಸಹ ನಿಮ್ಮ ಲ್ಯಾಪ್‌ಟಾಪ್ ನಿಧಾನವಾಗಲು ಕಾರಣವಾಗಿರಬಹುದು.