ಕಾರ್ಗಲ್ : ಸಾಗರ ತಾಲ್ಲೂಕಿನ ಕಾರ್ಗಲ್‌ನ ಹಳೆ ಪಂಪ್‌ಹೌಸ್ ವೃತ್ತದ ಬಳಿ ಬೈಕ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದ್ದು, ಬೈಕನಲ್ಲಿದ್ದ ಅಣ್ಣ ತಂಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೌಡೇಶ್ವರಿ ದೇವಳದ ಮುಂದೆ ಸಾಗರ ದಿಕ್ಕಿಗೆ ಬರುವ ಹಾದಿಯಲ್ಲಿರುವ ತಿರುವಿನಲ್ಲಿ ಗೋವಾ ಮೂಲದ ಕಾರೊಂದು ಅರಳಗೋಡಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನ ಹಿಂಬದಿಯಲ್ಲಿದ್ದ ಅನುರಾಧ ಚಾನೆಲ್‌ಗೆ ಬಿದ್ದಿದ್ದಾಳೆ. ಸ್ಥಳೀಯರು ತಕ್ಷಣಕ್ಕೆ ಚಾನೆಲ್‌ಗೆ ಹಾರಿ ಯುವತಿಯ ಪ್ರಾಣ ರಕ್ಷಿಸಿರುವುದಲ್ಲದೆ, ಅಪಘಾತದಲ್ಲಿ ಗಾಯಗೊಂಡಿರುವ ಬೈಕ್ ಸವಾರ ಶ್ರೀಕಾಂತನನ್ನೂ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಚಾನೆಲ್‌ಗೆ ಹಾರಿ ಯುವತಿಯನ್ನು ರಕ್ಷಿಸಿದ ಬಷೀರ್ ಹಾಗೂ ಅಶರಫ್ ಅವರ ಕುರಿತು ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.