ಬೆಂಗಳೂರು: ಬರುವ ಸೋಮವಾರದಿಂದ ಮೊಟ್ರೋ ಸಂಚಾರ ಆರಂಭವಾಗಲಿದ್ದು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಮೆಟ್ರೋ ಸಂಚಾರಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಬೆಲ್ಜಿಯಂ ಮೊಲಿನೊಸ್ ಎಂಬ ಶ್ವಾನತಳಿ ಸಹ ಮೆಟ್ರೋ ಕಾಯಲು ಸನ್ನದ್ಧವಾಗಿವೆ.
ಮಾರ್ಗಸೂಚಿಗಳು ಹೀಗಿವೆ ನೋಡಿ
ಒಂದಕ್ಕಿಂತ ಹೆಚ್ಚು ಮಾರ್ಗಗಳಿರುವ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸೆ.12 ರ ವೇಳೆಗೆ ಎಲ್ಲ ಮಾರ್ಗಗಳೂ ಕಾರ್ಯ ನಿರ್ವಹಿಸುವಂತೆ ಮಾಡಲು ಒಂದರ ನಂತರ ಇನ್ನೊಂದು ಮಾರ್ಗಗಳನ್ನು ಕಾರ್ಯಗತ ಮಾಡುವಂತೆ ತಿಳಿಸಿದೆ.
2. ಕಂಟೈನ್‌ಮೆಂಟ್ ಜೋನ್‌ಗಳಲ್ಲಿರುವ ನಿಲ್ದಾಣಗಳನ್ನು ಮುಚ್ಚಬೇಕು.
3. ಸಾಮಾಜಿಕ ಅಂತರ ಕಾಯ್ದುಕೊಳ್ಲುವಂತೆ ರೈಲಿನ ಒಳಗೆ ಹಾಗೂ ಹೊರಗೆ ಫಲಕಗಳನ್ನು ಅಳವಡಿಸಬೇಕು.
4. ತಪಾಸಣೆಯ ನಂತರ ಯಅವುದೇ ರೋಗಲಕ್ಷಣಗಳಿಲ್ಲದ ವ್ಯಕ್ತಿಗೆ ಮಾತ್ರ ಪರೈಾಣಕ್ಕೆ ಅವಕಾಶ ನೀಡಬೇಕು.
5. ಸ್ಯಾನಿಟೈಸರ್‌ಗಳನ್ನು ನಿಲ್ಧಾಣದ ಹಲವು ಜಾಗಗಳಲ್ಲಿ ಇರಿಸಬೇಕು.
6. ಸ್ಯಾನಿಟೈಸೇಶನ್ ಮೂಲಕ ಮಾತ್ರ ಹಣ ಸ್ವೀಕರಿಸಬೇಕು. ಸ್ಮಾರ್ಟ್ ಕಾರ್ಡ್‌ಗೆ ಹೆಚ್ಚು ಒತ್ತು.
7. ಇಳಿಯುವಾಗ ಮತ್ತು ಹತ್ತುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕ.
8. ಪ್ರಯಾಣಿಕರು ಸಾಧ್ಯವಾದಷ್ಟು ಕಡಿಮೆ ಲಗೇಜ್‌ನೊಂದಿಗೆ ಪ್ರಯಾಣ ಮಾಡಬೇಕು.
9. ನಿಲ್ದಾಣದ ಹೊರಗೂ ಹೆಚ್ಚು ಜನಸಂದಣಿ ಆಗದಂತೆ ಪೊಲೀಸರನ್ನು ನೇಮಿಸಬೇಕು.
10. ಬಿಎಂಆರ್‌ಸಿಎಲ್ ನಿಲ್ದಾಣಗಳ ಆವರಣದಲ್ಲಿ ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
11. ಪ್ರತಿ ರೈಲಿನಲ್ಲಿ ಗರಿಷ್ಠ 400 ಪ್ರಯಾಣಿಕರಿಗೆ ಮಾತ್ರ ಅನುಮತಿ ಇದೆ. ರೈಲಿನಲ್ಲಿ ಗರಿಷ್ಠ ಸಂಖ್ಯೆಯ ಪ್ರಯಾಣಿಕರಿದ್ದರೆ ಮುಂದಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗುವುದಿಲ್ಲ.
ಒಟ್ಟಿನಲಿ ಮಾ.22ರಿಂದ ಬಂದ್ ಆಗಿದ್ದ ಮೆಟ್ರೋ ರೈಲು ಸಂಚಾರ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಬರೋಬ್ಬರಿ 5 ತಿಂಗಳ ನಂತರ ಸಂಚಾರ ಆರಂಭವಾದಂತೆ ಆಗಲಿದೆ.