ಚೆನ್ನೈ: ಕೊರೋನಾ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್‌ಪಿಬಿ ಸ್ಥಿತಿ ಬಿಗಡಾಯಿಸಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆ.5ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗುರುವಾರ ರಾತ್ರಿ ವೇಳೆಗೆ ಬಿಗಡಾಯಿಸಿತ್ತು. ತಕ್ಷಣ ವೆಂಟಿಲೇಟರ್ ಅಳವಡಿಸಿದ ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ಮುಂದುವರಿಸಿದ್ದಾರೆ.
ಆಸ್ಪತ್ರೆ ಸೇರುವಾಗ ವಿಡಿಯೋ ಮಾಡಿ ಹಂಚಿಕೊಂಡಿದ್ದ 74 ವರ್ಷದ ಗಾಯಕ, ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರುತ್ತಿದ್ದೇನೆ. ಯಾರೂ ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದರು.