ನವದೆಹಲಿ: ಪ್ರಧಾನಿ ಮೋದಿಯವರ ಖಾಸಗಿ ಅಪ್ಲಿಕೇಶನ್ ಹಾಗೂ ನರೇಂದ್ರ ಮೋದಿ ವೆಬ್‌ಸೈಟ್‌ನ ಟ್ವಿಟ್ಟರ್ ಖಾತೆ ಇಂದು ಬೆಳಿಗ್ಗೆ 3.15 ರ ಸುಮಾರಿಗೆ ಹ್ಯಾಕ್ ಆಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತ ಟ್ವಿಟ್ಟರ್ ಹಾಗೂ ಪ್ರಧಾನಿ ಕಛೇರಿ ಅದನ್ನು ಸರಿಪಡಿಸಿದೆ.
25 ಲಕ್ಷ ಫಾಲೋವರ್ಸ್ ಹೊಂದಿರುವ ಈ ಖಾತೆ ಹ್ಯಾಕ್ ಆಗಿದ್ದು, ಹೌದು ಈ ಅಕೌಂಟ್ ಜಾನ್ ವಿಕ್ (hckindia.tutanota.)ನಿಂದ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಲಾಗಿತ್ತು, ಕೋವಿಡ್ ೧೯ ಪ್ಯಾಂಡಿಮಿಕ್‌ನಿಂದಾಗಿ ಪ್ರಧಾನಿ ಪರಿಹಾರ ನಿಧಿ ಮೂಲಕ ಸಹಾಯ ನೀಡಿ ಎಂದು ಕೇಳಲಾಗಿದ್ದು ಕ್ರಿಪ್ಟೋ ಕರೆನ್ಸಿ ಮೂಲಕ ಹಣ ನೀಡಿ ಎಂದು ಅಕೌಂಟ್ ನಂಬರ್ ಸಹ ನೀಡಲಾಗಿತ್ತು.
ಈ ವಿಚಾರದ ಬಗ್ಗೆ ಟ್ವಿಟ್ಟರ್ ಪ್ರತಿಕ್ರಿಯಿಸಿದ್ದು, ಈ ಖಾತೆಯನ್ನು ಸರಿಪಡಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಸದ್ಯಕ್ಕೆ ಇನ್ಯಾವುದೇ ಖಾತೆಗಳು ಹ್ಯಾಕ್ ಆಗಿರುವುದರ ಬಗ್ಗೆ ಮಾಹಿತಿಯಿಲ್ಲ ಎಂದಿದೆ.
ಇದೇ ಜುಲೈ ತಿಂಗಳಿನಲ್ಲಿ ಸಹ ಹಲವು ಖ್ಯಾತನಾಮರ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿದ್ದು ವರದಿಯಾಗಿತ್ತು. ಅಮೆರಿಕ ಚುನಾವಣೆಯ ಅಭ್ಯರ್ಥಿ ಜೋ ಬಿಡನ್, ಒಬಾಮಾ, ಊಬರ್ ಹಾಗೂ ಆಪಲ್‌ನ ಅಕೌಂಟ್‌ಗಳು ಸಹ ಹ್ಯಾಕ್ ಆಗಿದ್ದವು. ಈ ಖಾತೆಗಳಲ್ಲಿ ಬಿಟ್‌ಕಾಯ್ನ್‌ಗೆ ಹಣ ಕಳಿಸುವಂತೆ ಖಾತೆ ಸಂಖ್ಯೆ ನೀಡಲಾಗಿತ್ತು. ಇದಾದ ಕೆಲ ದಿನಗಳಲ್ಲೇ ಈ ಸಂಬಂಧ ಫ್ಲೋರಿಡಾ ಮೂಲದ 17 ವರ್ಷದ ಬಾಲಕನನ್ನೂ ಬಂಧಿಸಲಾಗಿತ್ತು.
https://twitter.com/narendramodi_in?s=20