ಬೆಂಗಳೂರು, ಆ.13- ಆರ್‍ಎಸ್‍ಎಸ್ ಸಂಘ ಪರಿವಾರ, ಎಸ್‍ಡಿಪಿಐ ಎಲ್ಲವೂ ಒಂದೇ ನಾಣ್ಯದ ಮುಖಗಳಿದ್ದಂತೆ. ಹೆಡ್, ಟೈಲ್ ಎರಡೂ ಅವರೇ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಏನು ಮಾಡಿದರು, ಇಲ್ಲಿ ಏನು ಮಾಡಿದರು ಎಂಬುದು ನನಗೆ ಗೊತ್ತಿದೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ.
ಬಿಜೆಪಿ ಸರ್ಕಾರ ಮೊದಲು ಎಸ್‍ಡಿಪಿಐ ಅನ್ನು ಬ್ಯಾನ್ ಮಾಡಲಿ. ಘಟನೆ ಬಗ್ಗೆ ತನಿಖೆ ಮಾಡಲು ಆರು ಜನರ ತಂಡ ರಚನೆ ಮಾಡಿದ್ದಾರೆ. ಘಟನೆಯ ಹಿಂದಿನ ವಿಚಾರವನ್ನು ಅರಿಯಬೇಕಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವತಃ ಪೊಲೀಸ್ ಠಾಣೆಯನ್ನೇ ರಕ್ಷಣೆ ಮಾಡಲು ಅವರಿಗೆ ಆಗಿಲ್ಲ. ಎಸ್‍ಡಿಪಿಐನಿಂದ ನಮಗೆ ಡ್ಯಾಮೇಜ್ ಆಗಿದೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಮತಗಳು ಹಂಚಿ ಹೋಗುವುದು ನಮ್ಮವೇ ತಾನೇ. ಅದಕ್ಕಾಗಿ ಅವರು ಎಸ್‍ಡಿಪಿಐಅನ್ನು ಬ್ಯಾನ್ ಮಾಡುತ್ತಿಲ್ಲ.
ಕೇಂದ್ರ ಹಾಗೂ ರಾಜ್ಯದಲ್ಲಿ ಇವರದ್ದೇ ಸರ್ಕಾರವಿದೆ. ಏಕೆ ಅವರು ಎಸ್‍ಡಿಪಿಐಅನ್ನು ಬ್ಯಾನ್ ಮಾಡುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.