ಬೆಂಗಳೂರು: ಸ್ಯಾಂಡಲ್ವುಡ್ನ ಅನೇಕ ತಾರೆಯರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕರು ಸೇರಿ ಹಲವರು ಭಾಗಿ ಆಗಿದ್ದಾರೆ ಎನ್ನುವ ಸುಳಿವು ನೀಡಿರುವ ಇಂದ್ರಜಿತ್ ಅವರು ಸೂಕ್ತ ರಕ್ಷಣೆ ದೊರಕಿದಲ್ಲಿ ಸತ್ಯ ಹೇಳುವುದಾಗಿ ಹೇಳಿದ್ದರು. ಪ್ರತಿಯಾಗಿ ಇಂದು ಬೆಳಿಗ್ಗೆ ೧೧.೩೦ಕ್ಕೆ ಕಚೇರಿಗೆ ಬರುವಂತೆ ಸಿಸಿಬಿ ಅಧಿಕಾರಿಗಳು ಇಂದ್ರಜಿತ್ಗೆ ನೋಟೀಸ್ ನೀಡಿದ್ದಾರೆ.
ಯಾರ ಹೆಸರನ್ನೂ ಬಾಯಿಬಿಡದೇ, ಪರೋಕ್ಷವಾಗಿ ಚಿರು ಸಾವಿನ ಪೋಸ್ಟ್ ಮಾರ್ಟ್ಂ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆಯನ್ನು ಇಂದ್ರಜಿತ್ ವಿಡಿಯೋ ಮೂಲಕ ಕೇಳಿದ್ದರು. ಅದಕ್ಕೆ ಸಾ.ರಾ ಗೋವಿಂದ್, ಗುರುಕಿರಣ್, ರಚಿತಾರಾಮ್ ಸೇರಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ತನಿಖೆ ಚಾಲ್ತಿಯಲ್ಲಿರುವುದರಿಂದ ಅನೇಕ ಖ್ಯಾತನಾಮರ ಹೆಸರು ಬಯಲಾಗುವ ಸಾಧ್ಯತೆ ದಟ್ಟಳವಾಗಿದೆ.