ಚೆನ್ನೈ : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್‍ಕೆ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಕೋವಿಡ್-19 ಟೆಸ್ಟ್ಗೆ ಳಪಟ್ಟಿದ್ದು, ಕೊರೋನಾ ನೆಗೆಟಿವ್ ಎಂದು ದೃಢಪಟ್ಟಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಸೆ.19ರಿಂದ ಐಪಿಎಲ್‍ನ 13 ನೇ ಆವೃತ್ತಿ ಆರಂಭಗೊಳ್ಳಲಿದ್ದು, ಅದಕ್ಕೆ ತೆರಳುವ ಸಲುವಾಗಿ ಎಲ್ಲ ಆಟಗಾರರು ಕೋರೋನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಹೀಗೆ ಪರೀಕ್ಷೆ ನಡೆಸಿದ ಸಂದರ್ಭಕ್ಯಾಪ್ಟನ್ ಕೂಲ್‍ಗೆ ಕೊರೋನಾ ನೆಗೆಟಿವ್ ಬಂದಿದ್ದು, ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇಂಗ್ಲೆಂಡ್‍ನಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಕೋವಿಡ್ ಸಂಕಷ್ಟದಿಂದಾಗಿ ಐಪಿಎಲ್ ಸಹ ಮುಂದೆ ಹೋಗಿದ್ದರಿಂದ ಧೋನಿಯನ್ನು ಮೈದಾನದಲ್ಲಿ ಕಾಣುವ ಅಭಿಮಾನಿಗಳ ತವಕಕ್ಕೆ ತಣ್ಣೀರು ಬಿದ್ದಿತ್ತು. ಸದ್ಯ ಧೋನಿ ಐಪಿಎಲ್ ಆಡುತ್ತಿರುವುದರಿಂದ ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.