ನವದೆಹಲಿ: ಭಾರತ್ ಬಯೋಟೆಕ್ ಔಷಧ ತಯಾರಿಕಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಅನ್ನು ಕೋತಿಗಳ ಮೇಲೆ ಪ್ರಯೋಗಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂದು ಸಂಸ್ಥೆ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದೆ
ಹೈದರಾಬಾದ್ ಮೂಲದ ಬಯೋಟೆಕ್ ಸಂಸ್ಥೆ ಮೊದಲ ಹಂತದಲ್ಲಿ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಿತ್ತು. ಈಗ 14 ದಿನಗಳ ಕಾಲ 20 ಮಂಗಗಳ ಮೇಲೆ ನಡೆಸಿರುವ ಪ್ರಯೋಗದಲ್ಲಿ ಮಂಗಗಳನ್ನು ಕೋವಿಡ್ ಹರಡುವ ಸ್ಥಳದಲ್ಲಿ ಇರಿಸಲಾಗಿತ್ತು. 14 ದಿನಗಳು ಕಳೆದ ನಂತರ ಮಂಗಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ ಎಂದು ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.
Bharat Biotech proudly announces the animal study results of COVAXIN™ – These results demonstrate the protective efficacy in a live viral challenge model.
Read more about the results here – https://t.co/f81JUSfWpD@icmr_niv #BharatBiotech #COVAXIN #Safety #Vaccine #SARSCoV2 pic.twitter.com/fva1SOcLOr
— Bharat Biotech (@BharatBiotech) September 11, 2020