ಅಯೋಧ್ಯಾ : ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನಿತ್ಯ ಗೋಪಾಲದಾಸ್ (Mahanth Nitya Gopaldas) ಅವರಿಗೆ COVID-19 ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಮಹಾಂತ್ ನಿತ್ಯ ಗೋಪಾಲದಾಸ್ (Mahanth Nitya Gopaldas) ಅವರಿಗೆ COVID-19 ಪಾಸಿಟಿವ್ ಬಂದಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಸಮಾಲೋಚನೆ ನಡೆಸಿ ಆರೋಗ್ಯ ವಿಚಾರಸಿಕೊಂಡಿದ್ದಾರೆ.
ಅಲ್ಲದೆ ಮಹಾಂತ್ ನಿತ್ಯ ಗೋಪಾಲದಾಸ್ ಅವರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾದ ಜಿಲ್ಲಾಧಿಕಾರಿ ಮತ್ತು ಚಿಕಿತ್ಸೆ ನೀಡುತ್ತಿರುವ ಮೇದಾಂತ ಆಸ್ಪತ್ರೆಯ ವೈದ್ಯ ಡಾ. ತ್ರೆಹನ್ ಅವರಿಗೆ ಸೂಚಿಸಿದ್ದಾರೆ.
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಭೂಮಿಪೂಜೆಯಲ್ಲಿ ಮಹಾಂತ್ ನಿತ್ಯ ಗೋಪಾಲದಾಸ್ ಭಾಗಿಯಾಗಿದ್ದರು. ಅಂದು ಅವರೊಂದಿಗೆ ವೇದಿಕೆಯಲ್ಲಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) , ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೇನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿದ್ದರು. ಇವರುಗಳು ಈಗ COVID- 19 ಪರೀಕ್ಷೆ ಮಾಡಿಸಿಕೊಳ್ಳಬೇಕಾಗಬಹುದು.