ನವದೆಹಲಿ: ಭಾರತ ಸರ್ಕಾರ ಎರಡನೇ ಹಂತದಲ್ಲಿ ಚೀನಾದ ೧೧೮ ಅಪ್ಲಿಕೇಶನ್‌ಗಳನ್ನು ರದ್ದು ಮಾಡಿರುವ ಕುರಿತು, ಚೀನಾದ ವಾಣಿಜ್ಯ ಸಚಿವಾಲಯ ವಿರೋಧ ವ್ಯಕ್ತಪಡಿಸಿದೆ.
ಚೀನಾದ ಅಪ್ಲಿಕೇಶನ್‌ಗಳ ಬಗ್ಗೆ ಭಾರತದ ಧೋರಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಚೀನಾದ ಹೂಡಿಕೆದಾರರು ಹಾಗೂ ಸೇವಾದಾರರ ಹಕ್ಕುಗಳಿಗೆ ಇದರಿಂದ ತೊಂದರೆಯಾಗಿದೆ. ಭಾರತ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಚೀನಾ ವಾಣಿಜ್ಯ ಸಚಿವಾಲಯದ ಗಾವೋ ಫೆಂಗ್ ಹೇಳಿದ್ದಾರೆ.
ಚೀನಾ ಸಂಸ್ಥೆಗಳಿಗೆ ಕಾನೂನು ತಜ್ಞರಾಗಿ ಕಾರ್ಯ ನಿರ್ವಹಿಸಿದ್ದ ಅತುಲ್ ಪಾಂಡೆ ಸಹ ಈ ಬಗ್ಗೆ ಮಾತಾಡಿದ್ದು, ಈ ನಿಷೇಧ ಕಾರ್ಯ ಕೇವಲ ಚೀನಾ ಮಾರುಕಟ್ಟೆಗೆ ಮಾತ್ರ ಹೊಡೆತ ನೀಡುತ್ತಿಲ್ಲ. ಮುಂದೆ ಭಾರತದಲ್ಲಿ ಹೂಡಿಕೆ ಮಾಡುವವರೂ ಈ ನಿರ್ಧಾರದಿಂದ ಹೂಡಿಕೆ ಮಾಡಲು ಹಿಂಜರಿಯಲಿದ್ದಾರೆ ಎಂದಿದ್ದಾರೆ.
ಭಾರತ ಸರ್ಕಾರ ಬುಧವಾರ ಸಾಯಂಕಾಲ ಪಬ್‌ಜಿ ಸೇರಿ ೧೧೮ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧ ಮಾಡಿದ್ದಲ್ಲದೆ, ಇದನ್ನು ಡಿಜಿಟಲ್ ಸ್ಟ್ರೈಕ್ ಎನ್ನುವುದಾಗಿ ಬಣ್ನಿಸಿತ್ತು. ಕೇವಲ ಪಬ್‌ಜಿ ಒಂದೇ ಅಪ್ಲಿಕೇಶನ್ ಭಾರತದಲ್ಲಿ ೧,೭೫ ಸಾವಿರ ಗ್ರಾಹಕರನ್ನು ಪಡೆದಿತ್ತು. ಈಗ ಪಬ್‌ಜಿ ಬ್ಯಾನ್‌ನಿಂದಾಗಿ ವಿತರಣಾ ಸಂಸ್ಥೆಯಾಗಿದ್ದ ಟೆನ್ಸೆಂಟ್‌ಗೆ ರೂ.೧೧೨೦ ಕೋಟಿ ನಷ್ಟವಾಗಿದೆ. ಇನ್ನುಳಿದಂತೆ ಬೈದು, ಏಪಸ್, ಅಲಿಬಾಬಾದಂತಹ ಸಂಸ್ಥೆಗಳೂ ನಷ್ಟ ಅನುಭವಿಸಿವೆ.