ಮುಂಬೈ: ಕ್ಯಾಲಿಫೋರ್ನಿಯಾ ಸ್ಟೇಟ್ ಅಸೆಂಬ್ಲಿಯು ಇತ್ತೀಚೆಗೆ ವಿವಾದಾತ್ಮಕ ಸಾವಿಗೀಡಾದ ಸುಶಾಂತ್ ಸಿಂಗ್ ರಾಜಪೂತ್ ಹೆಸರಿಗೆ ಗುರುತಿಸುವಿಕೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.
ಸುಶಾಂತ್ ಬಾಲಿವುಡ್ ಮುಖಾಂತರವಾಗಿ ಭಾರತದ ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಮಾಡಿರುವ ಸಾಧನೆಗಾಗಿ ಈ ಗೌರವ ಸಲ್ಲಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾ ಸರ್ಕಾರ ಹೇಳಿಕೊಂಡಿರುವ ಪತ್ರ ವೈರಲ್ ಆಗಿದೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಭಾರತದ ಸ್ವಾತಂತ್ರ್ಯ ದಿನದಂದು ಕ್ಯಾಲಿಫೋರ್ನಿಯಾ ಸರ್ಕಾರವು ನನ್ನಣ್ಣನನ್ನು ಗೌರವಿಸಿದೆ. ಕ್ಯಾಲಿಫೋರ್ನಿಯಾವು ನಮ್ಮೊಂದಿಗಿದೆ. ಮತ್ತೆ ನೀವು? ಎಂದು ಇನ್‌ಸ್ಟಾ ದಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CD5QdXnlF03/