ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71 ನೆಯ ಜನ್ಮದಿನದ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ ಎನ್ನುವ ಕಾರ್ಯಕ್ರಮ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಕ್ಕೆ ಚಾಲನೆ ನೀಡಿದ್ದರು, ಇದಲ್ಲದೇ ಸುಮಾರು 13 ಕ್ಕೂ ಅಧಿಕ ಕೇಂದ್ರ, ರಾಜ್ಯದ ಸಚಿವರುಗಳು ಆಗಮಿಸಿ ಸೂರ್ಯ ಪಥ್, ಸಂಗೀತ ಮನೆಗೆ ಸರ್ಕಾರಿ ಶಾಲೆಯ ಮಕ್ಕಳು, ನಗರ ಅಂಚಿನ ಗ್ರಾಮಗಳ ಅಭಿವೃದ್ಧಿ ಕಾರ್ಯ, ಸಮಗ್ರ ಆರೋಗ್ಯ, ಹೀಗೆ ಹತ್ತಾರು ಹಲವಾರು ಯೋಜನೆಗಳ ಅನುಷ್ಠಾನ ಕಾರ್ಯಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಿ 20 ದಿನಗಳ ಕಾರ್ಯಕ್ರಮದ ಒಂದು ಪುಸ್ತಕವನ್ನು ಸಹ ಬಿಡುಗಡೆ ಮಾಡಿ ಮಾನ್ಯ ರಾಮದಾಸ್ ಅವರ ಈ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಈ ಕಾರ್ಯಗಳನ್ನು ವಿಸ್ತರಿಸುವುದಾಗಿಯೂ ಹೇಳಿದ್ದರು.
ಮೋದಿ ಯುಗ್ ಉತ್ಸವದ ಪುಸ್ತಕವನ್ನು ಮಾನ್ಯ ಶಾಸಕರು ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕರ್ನಾಟಕ ಭಾಜಪಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಹಾಗೂ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನೀಡಿದ್ದರು.
ಕಳೆದ 2 ದಿನಗಳಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು ನಿನ್ನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಗಳ ಬಗ್ಗೆ ಶಾಸಕರನ್ನು, ಸಚಿವರನ್ನು ಕುರಿತು ಮಾತನಾಡುವಾಗ *ನಾನು ನೋಡಿದ್ದೇನೆ ಇಲ್ಲಿ ಮೈಸೂರಿನ ಶಾಸಕರಾದ ರಾಮದಾಸ್ ಜಿ ಕುಳಿತಿದ್ದಾರೆ ಅವರ ಕ್ಷೇತ್ರದಲ್ಲಿ ಕ್ಯಾOಪ್ ಗಳನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಆರ್.ಅಶೋಕ್, ಡಾ.ಸುಧಾಕರ್ ಎಲ್ಲರೂ ಅಲ್ಲಿಗೆ ಹೋಗಿ ನೋಡಿದ್ದಾರೆ ಒಂದೊಂದೂ ಯೋಜನೆಗಳ ಅನುಷ್ಠಾನದ ಬಗ್ಗೆ ಒಂದು ಪುಸ್ತಕವನ್ನೂ ಸಹ ಅವರು ಮಾಡಿದ್ದಾರೆ ಅವರಿಗೆ ಎಲ್ಲರೂ ಸೇರಿ ಚಪ್ಪಾಳೆ ಬಡಿಯಿರಿ, ಅವರು ಶಾಸಕರಾಗಿ ಆದಿವಾಸಿಗಳಿಗೆ, ಬಡವರಿಗೆ ಯೋಜನೆಗಳ ಅನುಷ್ಠಾನವನ್ನು ಮಾಡಿದ್ದಾರೆ. ನೀವುಗಳೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕ್ಯಾOಪ್ ಹಾಕಿಕೊಂಡು ಈ ರೀತಿ ಯೋಜನೆಗಳ ಅನುಷ್ಠಾನ ಮಾಡಿಸಿ ಮನೆ ಮನೆಗೆ ತೆರಳಿ ಇದು ಮೋದಿಜಿ ಸರ್ಕಾರದ ಯೋಜನೆ, ಇದು ಬೊಮ್ಮಾಯಿ ಸರ್ಕಾರದ ಯೋಜನೆ ಎಂದು ತಿಳಿ ಹೇಳುವ ಕೆಲಸ ಮಾಡಬೇಕು* ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನ್ಯ ಶಾಸಕರು ಶ್ರೀಯುತ ಅರುಣ್ ಸಿಂಗ್ ಜಿ ಅವರ ಈ ಪ್ರಶಂಸೆಯ ಮಾತುಗಳು ನನಗೆ ಕೆಲಸ ಮಾಡಲು ಮತ್ತಷ್ಟು ಹುರುಪು ಬಂದಂತಾಗಿದೆ. ಕ್ಷೇತ್ರದಲ್ಲಿ ಈ ಮಟ್ಟಿಗೆ ಯೋಜನೆ ಅನುಷ್ಠಾನ ಆಗುತ್ತಿದೆ ಅಂದರೆ ಅದರ ಹಿಂದೆ ನಮ್ಮ ಕಾರ್ಯಕರ್ತರ ಹಾಗೂ ಅಧಿಕಾರಿಗಳ ಶ್ರಮ ಹೇಳತೀರದು, ಅವರಿಗೆ ಈ ಸಂದರ್ಭದಲ್ಲಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಂಘಟನೆ ಹಾಗೂ ಸರ್ಕಾರ ಜೊತೆ ಗೂಡಿ ಕ್ಷೇತ್ರದ ಜನತೆಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ಕ್ಷೇತ್ರವನ್ನು ನಂ.1 ಮಾಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದರು.