ಮೊನ್ನೆಮೊನ್ನೆ ಮೋದಿಯವರ ಮನೆಗೆ ಪುರೋಹಿತರು ಬಂದು ಮಂತ್ರವನ್ನು ಪಠಿಸಿ ರಕ್ಷೆಯನ್ನು ಕಟ್ಟಿ ಹೋಗಿದ್ದಾರೆ ಎನ್ನುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ.. ಬಹುಶಃ ಭಗವಂತನೇ ಪುರೋಹಿತರಿಗೆ ಸೂಚಿಸಿರಬೇಕು.! ಇಲ್ಲದಿದ್ದಲ್ಲಿ ಪುರೋಹಿತರು ಏಕೆ ಬರುತ್ತಿದ್ದರು? ಮೋದಿಯವರ ಪಾಲಿಗೆ ಭಗವಂತನು ಇದ್ದೇ ಇದ್ದಾನೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿಬೇಕಾ? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.. ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಕೂಡ ಮೋದಿ ಅವರ ಫೋಟೋದೊಂದಿಗೆ ಮೃತ್ಯುಂಜಯ ಮಂತ್ರ ಬರೆದು ಹಂಚಿಕೊಂಡಿದ್ದಾರೆ.. ಇದೆಲ್ಲಾ ಇರಲಿ…ಪಂಜಾಬ್ ನಲ್ಲಿ ನಡೆದ ಘಟನೆಯ ಸುತ್ತ ಏನೆಲ್ಲಾ ಚರ್ಚೆಗಳು ನಡೆಯುತ್ತಿದೆ ಒಮ್ಮೆ ನೋಡೋಣ ಬನ್ನಿ..
“ಭಾರತದಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದರೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬೇಕು, ರಾಜಕೀಯದಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಬದುಕಬೇಕು. ಆಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ”…
ಯಾರೊ ಭಯೋತ್ಪಾದಕರೋ ಶತ್ರು ರಾಷ್ಟ್ರಗಳೋ ನಮ್ಮ ಪ್ರಧಾನಿಯನ್ನು ಕೊಲ್ಲುವ ಪ್ರಯತ್ನದಲ್ಲಿದ್ದರೆ, ಅದು ಹೇಗೋ ಇಂಟಲಿಜೆನ್ಸ್ ನವರು ಪತ್ತೆ ಹಚ್ಚಿ ಪ್ರಧಾನಿಗೆ ಬಧ್ರತೆ ಕೊಡಬಹುದು ಅಥವ ಕಾಪಾಡಬಹುದು….ಆದರೆ ಆಳುವ ಹಾಗು ಪ್ರಧಾನಿಯ ಬಧ್ರತೆಯ ಜವಾಬ್ದಾರಿ ವಹಿಸಬೇಕಾದ ಒಂದು ರಾಜ್ಯ ಸರ್ಕಾರವೇ ಪ್ರಧಾನಿಯ ಸಾವಿಗೆ ಸಂಚು ರೂಪಿಸಿದರೆ ಯಾವ ಇಂಟೆಲಿಜೆನ್ಸ್ ಆಗಲಿ ಬಧ್ರತಾ ಪಡೆಗಳಾಗಲಿ ಏನು ಮಾಡಲು ಸಾಧ್ಯ….
ಮೋದಿಯನ್ನ ಮುಗಿಸಿದರೆ ಅರಾಜಕೆ ಆಗಬಹುದು… ಎಷ್ಟು ದಿನ?? ಜನ ಬಹುಬೇಗ ಮರೆಯುತ್ತಾರೆ. ಮುಂದೆ ಹೇಗೂ ಗುಂಡಾಗಿರಿ ಮಾಡಿ ಜನರನ್ನ ಹೆದರಿಸಿ ತಿಳಿದವರು ಓಟ್ ಹಾಕಲು ಬರದಂತೆ ಮಾಡಿ ಅಧೀಕಾರವನ್ನು ಹಿಡಿಯಬಹುದು ಎಂಬ ಹೊಲಸು ಆಲೋಚನೆ ಕಾಂಗಿಗಳಗೆ ಮಾತ್ರ ಬರಲು ಸಾಧ್ಯ. ಇಂತಹ ತೆರೆದ ಸತ್ಯವನ್ನೂ ಕಾಂಗಿ ಚಮಚಾಗಳು ಸಮರ್ಥಿಸಿ ಕೊಳ್ಳುವುದನ್ನ ನೋಡಿದಾಗ ಇವರೆಲ್ಲ ಮನುಷ್ಯರಾ?! ಎಂದೆನಿಸುತ್ತದೆ. ಮೋದಿಯ ಮೇಲೆ ಅದೆನು ದ್ವೇಶ ಅದೇನು ಕಿಚ್ಚು…. ಕೆಲವರು ಬಹಿರಂಗವಾಗಿಯೇ ಅಯ್ಯೊ ಬದುಕಿ ವಾಪಾಸಾದನಲ್ಲ ಎಂದು ಕರುಬಿ ಕರುಬಿ ಬರೆದುಕೊಂಡಿದ್ದಾರೆ…..
ನಿಜಕ್ಕೂ ನಮ್ಮ ಭಾರತ ದೇಶಕ್ಕೆ ಭವಿಷ್ಯವಿಲ್ಲ….. ಇನ್ನು ಕೆಲವು ದಶಕಗಳಲ್ಲಿ ಭಾರತ ಭಾರತವಾಗಿ ಉಳಿಯುವುದೂ ಇಲ್ಲ….
ಭಧ್ರತಾ ವೈಫಲ್ಯ ಎಂಬ ಸಂಚು !
1) ಪಂಜಾಬ್ ಮುಖ್ಯಮಂತ್ರಿ ಪ್ರಧಾನಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ!
2) ಪಂಜಾಬ್ ಮುಖ್ಯಮಂತ್ರಿ ಮತ್ತು ಡಿಜಿಪಿ ಫೋನ್ ಕರೆಗಳನ್ನೇ ಸ್ವೀಕರಿಸಲಿಲ್ಲ!
3) ಪ್ರಧಾನಿಯವರು ಭಧ್ರತಾ ತಂಡದ ಸಮೇತ ಫ್ಲೈ ಓವರ್ ಮೇಲೆ ತಿರುವುಗಳನ್ನು ತೆಗೆದುಕೊಳ್ಳಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿ 20 ನಿಮಿಷಗಳ ಕಾಲ ಅಕ್ಷರಶಃ ಬಂಧನದ ಸ್ಥಿತಿಯಲ್ಲಿ ಇದ್ದದ್ದು!
4) ಈ ಘಟನೆಗೆ ಆರಿಸಿಕೊಂಡಿದ್ದು ಪಾಕಿಸ್ತಾನ ಗಡಿಯ ಕೇವಲ 10 ಕಿ ಮೀ ದೂರದಲ್ಲಿದ್ದ ಸೇತುವೆಯ ಮೇಲೆ!
5) ಪಂಜಾಬ್ ಡಿಜಿಪಿ ಪ್ರಧಾನಿಯವರ ತಂಡದ ಸಂಚಾರಕ್ಕೆ ಅನುಮತಿ ಕೊಟ್ಟನಂತರ ನಿನ್ನೆ ಭಧ್ರತೆಯ ರಿಹರ್ಸಲ್ ನಡೆಸಿದ ನಂತರವೂ ತಾನು ಸ್ಥಳದಲ್ಲಿ ಇರದಿದ್ದದ್ದು ಮತ್ತು ಫೋನ್ ಕಾಲ್ ಗಳನ್ನೂ ಸ್ವೀಕರಿಸದಿದ್ದದ್ದು!
6) ಘಟನೆಯ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್ ನಾಯಕರು ಘಟನೆಯನ್ನು ಸಂಭ್ರಮಿಸಿ ಟ್ವೀಟ್ ಮಾಡುತ್ತಿದ್ದದ್ದು!
7) ದೇಶದ ಪ್ರಧಾನಿಗಳ ಭದ್ರತೆ ನಿಯಮಗಳನ್ನು ನಿರ್ಲಕ್ಷಿಸಿದ ಪಂಜಾಬ್ ಸರ್ಕಾರಕ್ಕೆ ಧಿಕ್ಕಾರ. ಇದೊಂದು ರಾಷ್ಟ್ರೀಯ ಭದ್ರತೆಗೆ ಎಸೆದ ಸವಾಲು ಮತ್ತು ಸಂಚು.
ದೇಶದ ಪ್ರಧಾನಿಗಳ ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಪಂಜಾಬ್ ರಾಜ್ಯ ಸರ್ಕಾರ ಸರಕಾರವೇ ಅಲ್ಲ ಬದಲಾಗಿ ಅದೊಂದು ಆರಾಜಕತೆಯ ಆಗರ.
ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಅಷ್ಟೇ ಅಲ್ಲ. ಅತ್ಯಂತ ನೀಚತನದ ಪರಮಾವಧಿ.
ಅಷ್ಟು ತಿಂಗಳುಗಳ ಪ್ರತಿಭಟನೆಯಾದರೂ, ಗಣರಾಜ್ಯೋತ್ಸವದ ದಿನ ಅಂಥ ಘಟನೆ ಘಟಿಸಿದರೂ ರೈತರ ಕಾಯ್ದೆಯನ್ನು ವಾಪಾಸು ಪಡೆದಿರಲಿಲ್ಲ. ಹಾಗೆ ರೈತರ ಹೋರಾಟಕ್ಕೆ ಸಂದ ಗೆಲುವು ಅದಾಗಿದ್ದರೇ ಗಣರಾಜ್ಯೋತ್ಸವದ ಮರುದಿನವೇ ಹಿಂಪಡೆಯಬೇಕಿತ್ತು. ಇಲ್ಲವೇ ಹಲವು ಸುತ್ತಿನ ಮಾತುಕತೆಗಳಂತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಅವರ ಷರತ್ತುಗಳಿಗೆ ಒಪ್ಪಿ ಅಳವಡಿಸಲೂಬಹುದಿತ್ತು. ಆದರೆ ದಿಢೀರ್ ಎಂದು ದೇಶವನ್ನುದ್ದೇಶಿಸಿ ಮಾತಾಡುತ್ತಾ ಹಿಂಪಡೆದರು ಎಂದರೆ ಯಾವುದೋ ಗುಪ್ತಚರ ಇಲಾಖೆಯಿಂದ ಇಡಿಯ ದೇಶಕ್ಕೆ ಧಕ್ಕೆ ತರುವ ಮಾಹಿತಿ ಸಿಕ್ಕಿರಬಹುದಲ್ಲವೇ? “ರೈತರ ಒಳಿತಿಗೆ ಕಾಯ್ದೆ ತಂದೆ, ದೇಶದ ಒಳಿತಿಗೆ ಹಿಂಪಡೆಯುತ್ತಿದ್ದೇನೆ” ಎಂಬ ಸಣ್ಣ ಸುಳಿವನ್ನು ಪ್ರಧಾನಿಗಳು ಆವತ್ತಿನ ಭಾಷಣದಲ್ಲೇ ಕೊಟ್ಟಿದ್ದಾರೆ. ರೈತರ ಹೋರಾಟದಲ್ಲಿ ಮೊದಮೊದಲು ರೈತರೇ ಇದ್ದರು. ನಂತರ ದಲ್ಲಾಳಿಗಳು ಬಂದು ಸೇರಿಕೊಂಡರು. ನಂತರದ ದಿನಗಳಲ್ಲಿ ಯಾವಾಗ ರೈತ ಎಂಬ ಸೆಂಟಿಮೆಂಟ್ ಮೋದಿಯನ್ನು ಬಗ್ಗುಬಡಿಯಲು ಅಸ್ತ್ರವಾಗಬಲ್ಲದು ಎಂದು ಅರಿತರೋ ಒಂದೊಂದೇ ವಿರೋಧಿ ಶಕ್ತಿಗಳು ಹೋರಾಟದೆಡೆಗೆ ಧ್ರುವೀಕರಣಗೊಂಡವು. ಸುಮ್ಮನೆ ಯೋಚಿಸಿ ರೈತರ ಹೋರಾಟದಲ್ಲಿ ಕಾಯ್ದೆಯ ತಿದ್ದುಪಡಿ ಅಥವಾ ಕಾಯ್ದೆಯ ವಾಪಾಸಿನ ಎರಡೇ ಬೇಡಿಕೆಗಳಿರಬೇಕಿತ್ತು. ಆದರೆ ಅಲ್ಲಿ ರೈತರೊಂದಿಗೆ ಒಂದಾದ ಬೇರೆ ಬೇರೆ ಹಿತಾಸಕ್ತಿಯ ಜನರು ಬೇರೆ ಬೇರೆ ಬೇಡಿಕೆಗಳನ್ನು ಮುಂದಿಟ್ಟರು. ಖಲಿಸ್ತಾನ ಸ್ವತಂತ್ರಗೊಳ್ಳಬೇಕು, ವರವರ ರಾವ್ ಬಿಡುಗಡೆಯಾಗಬೇಕು, JNUನ ಗೂಂಡಾಗಳು ಬಿಡುಗಡೆಯಾಗಬೇಕು ಇಂಥ ಬೇಡಿಕೆಗೂ ರೈತರ ಕಾಯಿದೆಗೂ ಯಾವ ಸಂಬಂಧ.
ದೂರದ ದೇಶದ ನರ್ತಕಿ, ಹಾಡುಗಾರ್ತಿ, ಪರಿಸರ ತಜ್ಞೆ, ಪೋರ್ನ್ ನಟಿಯರೆಲ್ಲಾ ಇದಕ್ಕೆ ಬೆಂಬಲ ಸೂಚಿಸಿದ್ದೂ ಅವರಿಗೆ ದುಡ್ಡು ಹೋಗಿದ್ದೂ ಇವರ ಷಡ್ಯಂತ್ರದ ಟೂಲ್‌ಕಿಟ್ ಬಯಲಿಗೆ ಬಂದವು.
ಬಹುಶಃ ಈ ಅತಿರೇಕಗಳು ಜಾಸ್ತಿಯಾಗುತ್ತಾ ಶತ್ರು ರಾಷ್ಟ್ರಗಳು ಜೊತೆಯಾಗಿದ್ದರೇ ಒಂದಲ್ಲ ಒಂದು ದಿನ ದೇಶದ ಭದ್ರತೆಗೆ ಧಕ್ಕೆಯಾಗಿ ನಾಗರಿಕರ ಜೀವಕ್ಕೂ ಕಂಟಕ ತರುತ್ತಿತ್ತೋ ಏನೋ. ತನ್ನ ಹೊಲದಲ್ಲಿ ಉತ್ತಿ, ಬಿತ್ತಿ ಬೆಳೆಯುತ್ತಿರುವ ರೈತನಿಗೆ ಪಾಪ ಇವೆಲ್ಲಾ ಗೊತ್ತೇ ಇರಲಿಲ್ಲ. ನಿಮ್ಮ ಹೊಲಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರುತ್ತಾರೆ ಎಂಬ ಸುಳ್ಳನ್ನೇ ನಂಬಿಸಲಾಯಿತು.
ಒಂದು ನಿರ್ಧಾರದಿಂದ ಹಿಂದಡಿಯಿಟ್ಟದ್ದರ ಕ್ಲಿಯರ್ ಕಾರಣ ಅಥವಾ ಸುಳಿವು ಇವತ್ತು ಸಿಗುತ್ತಿಲ್ಲವೇ? ಹವಾಮಾನದ ತೊಂದರೆಯಿಂದ ಈ ರೂಟಿನಲ್ಲಿ ಬರುತ್ತಾರೆ ಎಂದರೆ ಪ್ರಧಾನಿಗಳೇನು ಸ್ಥಳೀಯ ಪೋಲೀಸರಿಗೂ ತಿಳಿಸದೇ ನುಗ್ಗುತ್ತಾರಾ? ಬರುವ ಮುನ್ನ ಭದ್ರತಾ ಮಾಹಿತಿ ಪಡೆದೇ ಬಂದಿರಬೇಕಲ್ಲವೇ? ಅಕಾಸ್ಮಾತ್ ಆ ಹಾದಿಯಲ್ಲಿ ಪ್ರತಿಭಟನೆ ನಡೆದಿದ್ದು ಗೊತ್ತಿಲ್ಲ ಅಂತಾದರೆ ಪೋಲಿಸ್ ಅನುಮತಿಯಿಲ್ಲದೇ ಪ್ರತಿಭಟನೆ ನಡೆಯಿತಾ? ಅಕಾಸ್ಮಾತ್ ಆಗಿ ಪ್ರತಿಭಟನೆಯನ್ನು ಚದುರಿಸಲು ಸಾಧ್ಯವಿಲ್ಲ ಅಂತಾದರೆ ಬೇರೆ ಮಾರ್ಗವನ್ನು ಹೇಳಿ ಆ ಕಡೆಯಿಂದ ಬರಲು ಹೇಳಲಾಗಲಿಲ್ಲವೇ? ಅಷ್ಟೇ ಅಲ್ಲ ಪ್ರಧಾನಿಗಳು ಹೊರಟರೆ ಆಸುಪಾಸಿನ ರಸ್ತೆಗಳನ್ನು ಸ್ವಚ್ಛಗೊಳಿಸಬೇಕು. ಡಬಲ್ ರೋಡಿನ ಆ ಬದಿಯಲ್ಲಿ ವಾಹನ ಸಂಚಾರ ನಡೆಯುತ್ತಲೇ ಇತ್ತು. ಪಾಕಿಸ್ತಾನ ಹತ್ತು ಕಿ ಮಿ ದೂರ ಅಷ್ಟೇ ಅಲ್ಲ. ಈ ರೀತಿ ಪ್ರಧಾನಿಯನ್ನೇ ತಡೆಯಬೇಕು ಅಂತ ಬಂದವರೂ ಹಾನಿ ಮಾಡದೇ ಇರುತ್ತಾರಾ? ರಾಜೀವ್ ಗಾಂಧಿಯವರ ಹತ್ಯೆಯಾಗಿದ್ದು ಯಾವುದೇ ಪ್ರತಿಭಟನೆ ಮತ್ತೊಂದು ಇಲ್ಲದ ಜಾಗದಲ್ಲಿ, ಇಂದಿರಾ ಗಾಂಧಿಯವರದ್ದು ಸ್ವತಃ ತಮ್ಮದೇ ಮನೆಯಲ್ಲಿ! ಹೀಗಿದ್ದಾಗ ಉಗ್ರರ ಹಿಟ್ ಲಿಸ್ಟಲ್ಲಿರುವ ಮೋದಿ ಅಂತ ಗಲಾಟೆಯಲ್ಲಿ ಏನೂ ಆಗದೇ ಪಾರಾಗಿದ್ದೇ ಹೆಚ್ಚು. ಮೋದಿ ಆ ರೂಟಲ್ಲಿ ಬರೋದು ಸರ್ಕಾರಕ್ಕೆ ಗೊತ್ತೇ ಇರಲಿಲ್ಲ ಅಂತಾದರೆ ಪ್ರತಿಭಟನಾಕಾರರಿಗೆ ಹೇಗೆ ಗೊತ್ತಾಯ್ತು? ಕೃಷಿ ಕಾಯ್ದೆಯೇ ಹಿಂಪಡೆದ ನಂತರ ಪ್ರತಿಭಟನೆಯಾದರೂ ಏತಕ್ಕೆ? ಪ್ರಧಾನಿ ಬಂದ ನಂತರವಾದರೂ ಲೋಕಲ್ ಪೋಲಿಸರು ಪ್ರತಿಭಟನಾಕಾರರನ್ನು ಚದುರಿಸುವುದು ದೊಡ್ಡ ಕೆಲಸವಾಗಿತ್ತಾ? ಅವರೊಂದಿಗೆ ಪೋಲಿಸರು ಚಹಾ ಹೀರುತ್ತಾ ನಿಂತ ವಿಡಿಯೋ ಒಂದು ವೈರಲ್ ಆಗಿದೆ. ಆ ರೂಟ್‌ನಿಂದ ಬರೋದು ಲೋಕಲ್ ಪೋಲಿಸರ ಹೊರತು ಮತ್ತಾರಿಗೂ ಗೊತ್ತಿರಲ್ಲ. ಪ್ರತಿಭಟನಾಕಾರರಿಗೆ ಹೇಗೆ ಮತ್ತು ಯಾರಿಂದ ಗೊತ್ತಾಯ್ತು?
ಎಷ್ಟೇ ಶತ್ರುಗಳಿದ್ದರೂ ಮೋದಿಯವರ ಜೊತೆಗೆ ದೈವಿ ಶಕ್ತಿಯೊಂದಿದೆ. ಅದಿರುವ ತನಕ ಅವರನ್ನೂ ಏನೂ ಮಾಡಲಾಗದು. ಪ್ರಧಾನಿಗೆ ಈ ರೀತಿ ಮಾಡಿದವರ ಕೈಗೆ ರಾಷ್ಟ್ರವನ್ನಿಟ್ಟರೇ ನಾಳೆ ರಾಷ್ಟ್ರವನ್ನು ಯಾವ ಗತಿಗೊಯ್ಯಬಹುದು ಎಂಬುದರ ಬಗ್ಗೆ ಪ್ರಜ್ಞೆ ಪ್ರಜೆಗಳಲ್ಲಿ ಮೂಡಬೇಕು.
ಅದೆಷ್ಟೋ ದಾಳಿಗಳ ನಂತರ ಜಗ್ಗದ ಕುಗ್ಗದ ದೇಶವನ್ನು ಯಾರಿಂದಲೂ ತುಂಡರಿಸಲಾಗದು. ಮೋದಿಯ ನಿವೃತ್ತಿಯ ನಂತರವೂ ಇಂಥ ನೂರಾರು ದೇಶಪ್ರೇಮಿ ನಾಯಕರು ಬಂದೇ ಬರುತ್ತಾರೆ. ಖಲಿಸ್ತಾನಿಗಳಿಗೆ ಒಂದು ಗತಿ ಕಾಣಿಸುವ ಸಮಯ ಈಗ ಬಂದಿದೆ. ಕೇಂದ್ರ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬಹುದಾ ಕಾದು ನೋಡಬೇಕು.