ಸಡಕ್‌ 2 ಗೆ ಐಎಂಡಿಬಿಯಿಂದ ಕಳಪೆ ರೇಟಿಂಗ್‌

Spread the love

ಮುಂಬೈ: ಹಲವು ದಶಕಗಳ ನಂತರ ನಿರ್ದೇಶನಕ್ಕೆ ಮರಳಿದ್ದ ಖ್ಯಾತ ನಿರ್ದೇಶಕ ಮಹೇಶ್ ಭಟ್ ನಿರ್ದೇಶನದ ಅವರ ಪುತ್ರಿ ಆಲಿಯಾ ಭಟ್ ಪ್ರಮುಖ ತಾರಾಗಣದಲ್ಲಿರುವ ಸಡಕ್ – 2 ಚಿತ್ರ ಬಹುತೇಕ ನೆಲ ಕಚ್ಚಿದೆಯೇ ಎಂಬ ಚರ್ಚೆಗಳು ಈಗ ಆರಂಭವಾಗಿದೆ.
ಕಾರಣ ಈ ಬಗ್ಗೆ ಪ್ರೇಕ್ಷಕರ ರೇಟಿಂಗ್ ಪ್ರಕಟವಾಗಿದ್ದು, 10 ಅಂಕಕ್ಕೆ ಕೇವಲ 1.2 ಅಂಕ ಲಭಿಸಿದೆ. ಈ ಮೂಲಕ ಇದನ್ನು ತಿರಸ್ಕರಿಸುವ ಸಂದೇಶವನ್ನು ನೀಡಲಾಗಿದೆ. ಅತೀ ಕನಿಷ್ಠ ಮಟ್ಟದ ಚಿತ್ರ ಎಂಬ ಷರಾ ಬರೆದಿದ್ದಾರೆ. ತ್ತೀಚೆಗಷ್ಟೇ ಈ ಸಿನಿಮಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೇ ನಡೆದುಹೋಗಿತ್ತು. ಅಲ್ಲದೆ, ಈ ಚಿತ್ರದಲ್ಲಿ ಆದಿತ್ಯಾ ರಾಯ್ ಕಪೂರ್ ಹಾಗೂ ಸಂಜಯ್ ದತ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಮಹೇಶ್ ಭಟ್ ಹೆಸರು ಸಾಕಷ್ಟು ಮುನ್ನೆಲೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಯ್ಕಟ್ ಸಡಕ್ -2 ಅಭಿಯಾನವೇ ನಡೆದು ಯೂಟ್ಯೂಬ್ ನಲ್ಲಿ ಲೈಕ್ ಗಳಿಗಿಂತ ಡಿಸ್ ಲೈಕ್ ಗಳೇ ಹೆಚ್ಚಾಗಿದ್ದನ್ನು ಸ್ಮರಿಸಬಹುದು.

Spread the love

Leave a Reply

Your email address will not be published. Required fields are marked *