ನವದೆಹಲಿ, ಆ 13 – ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಿಸುವ ಪ್ರಕ್ರಿಯೆಗೆ ಕೇಂದ್ರ ಮುಂದಾಗಿದೆ. ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಐಟಿ ಮೂಲಸೌಕರ್ಯ ಸ್ಥಾಪನೆಗೆ ಸಂಸ್ಥೆಯೊಂದನ್ನು ಆಯ್ಕೆ ಮಾಡುತ್ತಿದೆ.
2021ರ ಆರಂಭದ ಹೊತ್ತಿಗೆ ಭಾರತೀಯ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಸದ್ಯಕ್ಕೆ ಮುದ್ರಿತ ಪಾಸ್ ಪೋರ್ಟ್ ಗಳನ್ನೇ ಜನತೆಗೆ ವಿತರಿಸಲಾಗುತ್ತಿದೆ.
ಆದರೆ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ಪ್ರಾಯೋಗಿಕವಾಗಿ 20 ಸಾವಿರ ಇ ಪಾಸ್ ಪೋರ್ಟ್ ವಿತರಿಸಲಾಗಿದೆ. ಇದರಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಇರುತ್ತದೆ. ಈ ನಡೆಯಿಂದಾಗಿ ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಮಾಡುವುದು ಕಷ್ಟವಾಗುತ್ತದೆ. ಇನ್ನು ಪ್ರಯಾಣಿಕರ ವಲಸಿಗ ನಿಯಮಾವಳಿಗಳು ಸಲೀಸಾಗಿ ಮುಗಿಯಲಿವೆ.
ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಗುಣಮಟ್ಟಕ್ಕೆ ತಕ್ಕಂತೆ ಇ- ಪಾಸ್ ಪೋರ್ಟ್ ಗಳು ಇರಲಿವೆ ಒಂದು ಸಲ ಎಲ್ಲ ಸಿದ್ಧತೆ ಮುಗಿದು, ಪೂರ್ತಿಯಾಗಿ ತಯಾರಾದ ಮೇಲೆ ದೇಶದ ಎಲ್ಲ 36 ಪಾಸ್ ಪೋರ್ಟ್ ಕಚೇರಿಯಲ್ಲೂ ಇ -ಪಾಸ್ ಪೋರ್ಟ್ ವಿತರಣೆ ಮಾಡಲಾಗುವುದು ಎಂದೂ ಅಧಿಕಾರಿಗಳು ಹೇಳಿದ್ದಾರೆ