ಅಮೆರಿಕದ ಗಗನನೌಕೆಗೆ “ಕಲ್ಪನಾ ಚಾವ್ಲಾ” ಹೆಸರು

Spread the love

ನವದೆಹಲಿ: ಅಮೆರಿಕದ ಸಂಸ್ಥೆಯಾದ ನಾರ್ತ್‌ಕಾರ್ಪ್‌ ಗ್ರುಮ್ಮನ್‌ ತನ್ನ ನೂತನ ಸ್ಪೇಸ್‌ಕ್ರಾಫ್ಟ್‌ಗೆ ಕಲ್ಪನಾ ಚಾವ್ಲಾ ಹೆಸರಿಡಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ಸ್ಪೇಸ್‌ ಕ್ರಾಫ್ಟ್‌ಗೆ ಕಲ್ಪನಾ ಚಾವ್ಲಾ ಹೆಸರಿಡುವುದಾಗಿ ಸಂಸ್ಥೆ ತಿಳಿಸಿದೆ.

ನಾಸಾದ ಮೂಲಕ ನಭೋಮಂಡಲದಲ್ಲಿ ದಾಖಲೆ ಸೃಜಿಸಿದ ಭಾರತದ ಪ್ರಥಮ ಮಹಿಳೆ ಕಲ್ಪನಾ ಚಾವ್ಲಾ ಹೆಸರನ್ನು ಸ್ಪೇಸ್‌ ಕ್ರಾಫ್ಟ್‌ಗೆ ಇಡಲಿದ್ದು, ಈ ಬಗ್ಗೆ ಸಂಸ್ಥೆ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹೇಳಿಕೊಂಡಿದೆ.

“ನಾಸಾದ ಪ್ರಥಮ ಮಹಿಳಾ ಗಗನಯಾತ್ರಿಯಾಗಿ ಇತಿಹಾಸ ಸೃಷ್ಟಿಸಿದ ಕಲ್ಪನಾ ಚಾವ್ಲಾ ಅವರಿಗೆ ನಾವಿಂದು ಗೌರವ ಸಲ್ಲಿಸುತ್ತಿದ್ದೇವೆ. ಅವರ ಸೇವೆಯ ಅನನ್ಯತೆಗಾಗಿ ನಮ್ಮ ಸ್ಪೇಸ್‌ಕ್ರಾಫ್ಟ್‌ಗೆ ಎಸ್‌.ಎಸ್‌.ಕಲ್ಪನಾ ಚಾವ್ಲಾ ಎಂದು ಹೆಸರಿಸಿದ್ದೇವೆ “ಎಂದು ಸಂಸ್ಥೆ ಹೇಳಿಕೊಂಡಿದೆ.

ಸೆ.29ರಂದು ಈ ಗಗನನೌಕೆ ಮೊದಲ ಬಾರಿಗೆ ಆಕಾಶಕ್ಕೆ ನೆಗೆಯಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲ ಸಾಮಾಗ್ರಿಗಳನ್ನು ಹೊತ್ತೊಯ್ಯಲಿದೆ.


Spread the love

Leave a Reply

Your email address will not be published. Required fields are marked *