ಬೆಂಗಳೂರು : ಹಿಂದಿ ಹಾಗೂ ಆಂಗ್ಲ ಭಾಷೆಯ ಪ್ರಸಿದ್ಧ ವಾಗ್ಮಿ, ಖ್ಯಾತ ಉದ್ಯಮಿ ಸಂದೀಪ್ ಮಹೇಶ್ವರಿ, ಸಂಸ್ಕೃತವನ್ನು ಯೂಸ್‌ಲೆಸ್ ಎಂದಿದ್ದು, ಈ ಕುರಿತು ಜಾಲತಾಣಿಗರು ಆಕ್ರೋಶ ಹೊರಹಾಕಿದ್ದಾರೆ.
ಯೂತ್ ಐಕಾನ್ ಎಂದೇ ಪ್ರಸಿದ್ಧರಾಗಿರುವ ಸಂದೀಪ್ ಮಹೇಶ್ವರಿ ತಮ್ಮ ಕಾರ್ಯಕ್ರಮ ಸಂದರ್ಭದಲ್ಲಿ ಸಂಸ್ಕೃತವನ್ನು ಯೂಸ್‌ಲೆಸ್ ಎಂದು ಕರೆದಿದ್ದು, ಈ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ವ್ಯಕ್ತಿತ್ವದ ವಿರುದ್ಧವಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಆದರೆ ಸಂಸ್ಕೃತದ ಕುರಿತು ಆಡಿರುವ ಮಾತುಗಳು ತಪ್ಪಾಗಿದೆ. ಹಾಗಾಗಿ ಈ ವಿಚಾರಧಾರೆಯ ಕುರಿತು ಆಕ್ರೋಶವಿದೆ. ಸಂಸ್ಕೃತ ಎನ್ನುವುದು ಸಂಸ್ಕೃತಿಯನ್ನು ಬೆಳೆಸಿದ ಹಿರಿಮೆ ಎಂದು ಯೂಟ್ಯೂಬರ್ ಗಳು ಹೇಳಿಕೊಂಡಿದ್ದರೆ, ಅನೇಕರು ಮೆಮ್ ಗಳ ಮೂಲಕ ಸಂದೀಪ್ ಅವರನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ.
#क्षमा_मांगो_संदीप_माहेश्वरी#संदीप_क्षमां_याचस्व
Sandeep Maheshwari after insulting Sanskrit language in his recent videos : pic.twitter.com/KsEtMs3Lxy— Heisenberg (@methmemer) August 12, 2020