ಹಾಸನ: ಈ ಪಕ್ಷ ಹುಟ್ಟಿರೋದೆ ರೈತರ ಪರವಾಗಿ ಹೋರಾಟ ಮಾಡೋಕೆ,ನನ್ನ ಅರವತ್ತು ವರ್ಷದ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿಕೊಂಡೆ ಬಂದಿದ್ದೀನಿ,ರಾಜ್ಯದಲ್ಲಿ ಜನ ವಿರೋಧಿ ಕಾನೂ ನುಗಳಿಂದ ಆಗುವ ಪರಿಣಾಮದ ಬಗ್ಗೆ ಚರ್ಚೆ ಮಾಡಬೇಕಿದೆ.ಇಂದು ಆಕಸ್ಮಿಕವಾಗಿ ರಾಜ್ಯಸಭೆಗೆ ಸದಸ್ಯನಾಗಿ ದ್ದೇನೆ.ಎಷ್ಟು ಸಾಧ್ಯವೊ ಅಷ್ಟು ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರದ ಜನ ವಿರೋಧಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಹಾಸನದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಈ ಕಾನೂನಿನ ಅಪಾಯದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರಿಗೆ ತಿಳಿಸಬೇಕಿದೆ.ಮೈಸೂರು,ಮಂಡ್ಯ,ತುಮಕುರು,ಚಿಕ್ಕಬಳ್ಳಾಪುರ ಕೋಲಾರದಲ್ಲಿ ನಮ್ಮ ಶಾಸಕರಿದ್ದಾರೆ ಅಲ್ಲಿ ಪರಿಣಾಮಕಾರಿ ಹೋರಾಟ ನಡೆಸಬೇಕು.ಜೊತೆಗೆ ರಾಜ್ಯದೆಲ್ಲೆಡೆ ನಮ್ಮ ಮುಖಂಡರುಗಳು ಹೋರಾಟ ನಡೆಸಿ ಜನತೆ ಪರವಾಗಿ ನಿಲ್ಲಬೇಕಾಗಿದೆ.ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕೃತ ವಿರೋಧ ಪಕ್ಷವಲ್ಲ,ಆದರೂ ನಾವು ಹೋರಾಟ ಮಾಡುತ್ತಿದ್ದೇವೆ. ಇದು ದ್ವೇಷದಿಂದ ಮಾಡುತ್ತಿರೋ ಹೋರಾಟ ಅಲ್ಲ.ನಮ್ಮ ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು.ರಾಜ್ಯದ 30 ಜಿಲ್ಲೆಗಳಲ್ಲೂ ಇದರ ವಿರುದ್ಧ ಹೋರಾಟ ಮಾಡುತ್ತೇವೆ,ಜನರಿಗೆ ಆಗಿರುವ ಅನ್ಯಾಯ ತಡೆಗಟ್ಟಲು ಹೋರಾಟ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ನಾನು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ,ಈ ಹೋರಾಟ ಹಾಸನದಿಂದ ಪ್ರಾರಂಭ ಮಾಡುತ್ತಿದ್ದೇವೆ.ಕೊರೊ ನಾದಿಂದ ನನಗೇನಾದ್ರು ತೊಂದರೆ ಆಗುತ್ತೆ ಎಂದು ಕೆಲವರು ಹೆದರುತ್ತಾರೆ.ಆದ್ರೆ ನಾನು ಧೃತಿ ಗೆಡೋದಿಲ್ಲ, ಸಾವು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.ಹಾಗಾಗಿ ನಾನು ಈ ರಾಜ್ಯ ದಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ,ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ತಿದ್ದುಪಡಿಗಳ ವಿರುದ್ಧ ಹೋರಾಟ ಮಾಡುತ್ತೀನಿ ಎಂದು ಸರ್ಕಾರಕ್ಕೆ ಮಾಜಿ ಪ್ರಧಾನಿ ಅವರು ಸವಾಲು ಹಾಕಿದರು.
ರಾಜ್ಯ ಹಾಗು ಕೇಂದ್ರದ ಕೆಲ ಕಾನೂನುಗಳು ರೈತರಿಗೆ ಅನಾನುಕೂಲ ಆಗಿದೆ.ಕಾರ್ಮಿಕ ನೀತಿ ಗೆ ತಿದ್ದುಪಡಿ ಮಾಡಿರೋದು ದೊಡ್ಡ ಮಾರಕ ಆಗಲಿದೆ.ರಾಜ್ಯ ಸಭೆಯಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ.ಜನ ಸಂಘಟನೆ ಮಾಡಿ ರಾಜ್ಯಾದ್ಯಂತ ಹೋರಾಟ ಮಾಡಲು ಕೊರೊನ ಸ್ವಲ್ಪ ಅಡ್ಡಿಯಾಗಿದೆ.ಆದರೂ ರಾಜ್ಯದ 30 ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ.ಇನ್ನು ಎರಡು ತಿಂಗಳಲ್ಲಿ ಕೊರೊನ ಸ್ವಲ್ಪ ಕಡಿಮೆಯಾಗಬಹುದು ಎಂಬುದು ನನ್ನ ಭಾವನೆ.ಈ ಹೋರಾಟದಿಂದ ನಾವು ಹಿಂದೆ ಸರಿಯೋದಿಲ್ಲ.ಈ ಕಾಯಿದೆಗಳ ವಿರುದ್ಧ ಹಲವು ಸಂಘ ಸಂಸ್ಥೆಗಳು ಸಹ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ.ಅವರ ಜೊತೆ ನಾವೆಲ್ಲಾ ಸೇರಿ ಹೋರಾಟ ಮಾಡುತ್ತೇವೆ ಎಂದು ಅವರು ವಿವರಿಸಿದರು.
ಬೆಂಗಳೂರಿನ ಕೆಜಿ ಹಳ್ಳಿ ಗಲಭೆ ಪ್ರಕರಣದಿಂದ ನನಗೆ ತೀವ್ರ ಕಳವಳ ಉಂಟಾಗಿದೆ.ಇದು ಒಂದು ರಾಜಕೀಯ ಪಕ್ಷದ ಆಂತಕರಿಕ ಭಿನ್ನಾಭಿಪ್ರಾಯ ಹೊರ ಬರುತ್ತಿದೆ.ಅಖಂಡ ಶ್ರೀನಿವಾಸ ಮೂರ್ತಿಯವರೇ ಒಂದು ಹೆಸರು ಹೇಳಿ ಆರೋಪ ಮಾಡಿದ್ದಾರೆ.ಇದೊಂದು ದುರ್ದೈವ, ಬಿಜೆಪಿಯ ನಡವಳಿಕೆ ಈ ದೇಶದಲ್ಲಿ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನ ಒಳಗೂ ಆಂತರಿಕ ಕಲಹ ಹೊರ ಬಂದಿದೆ.ಈ ಪ್ರಕೆಣದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಅಂತವರಿಗೆ ಶಿಕ್ಷೆ ಆಗಲೇಬೇಕಿದೆ.ಈಗಾಗಲೆ 280 ಕ್ಕೂ ಹೆಚ್ಚು ಜನರನ್ನ ಬಂದಿಸಲಾಗಿದೆ
ಕೆಲವರನ್ನ ಊಹಾಪೋಹದ ಮೇಲೆ ಬಂದಿಸಿರಬಹುದು.ಎಲ್ಲರನ್ನೂ ಅಪರಾದಿಗಳು ಎಂದು ಹೇಳಲಾಗಲ್ಲ. ಸುಳ್ಳು ವದಂತಿಗಳಮೇಲೆ ನಿರಪರಾದಿಗಳಿಗೆ ಶಿಕ್ಷೆ ಆಗಬಾರದು ಅದು ಹಿಂದು ಆಗಿರಲಿ ಅಥವಾ ಯಾರೇ ಆಗಿ ರಲಿ ನಿರಪರಾಧಿಗಳಿಗೆ ಕೊಡಬೇಡಿ ಇದು ನನ್ನ ಮನವಿಯಾಗಿದೆ.
ಇದೊಂದು ದೊಡ್ಡ ವಿಚಾರ ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿತ್ತು,ಇಷ್ಟು ತೀವ್ರತರವಾದ ದಾಳಿ ಇದು.ಮನೆಗೆ ಬೆಂಕಿ ಹಚ್ಚಿದ್ದಾರೆ.ಮನೆ ಲೂಟಿ ಮಾಡಿದ್ದಾರೆ.ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ.ಈ ತರಹದ ಘಟನೆಗೆ ಮ್ಯಾಜಿ ಸ್ಟ್ರೇಟ್ ತನಿಖೆ ಸಾಲದು ಎಂಬುದು ನನ್ನ ಅನಿಸಿಕೆ.ಇದನ್ನ ಹಾಲಿ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಸಿಬಿಯಿಂದ ತನಿಖೆ ಮಾಡಿದರೆ ಒಳಿತು ಅನ್ನಿಸುತ್ತೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.