Thursday, April 24, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home Featured

ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India

News Desk by News Desk
September 25, 2024
in Featured, Main Story, ದೇಶ, ಪ್ರವಾಸ
0
ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India
0
SHARES
0
VIEWS
Share on FacebookShare on Twitter

ದಕ್ಷಿಣ ಭಾರತದಲ್ಲಿ ನೀವು ನೋಡಲೇಬೇಕಾಗಿರುವ ಸ್ಥಳಗಳ (Best Places to visit in South India) ಬಗ್ಗೆ ಇಲ್ಲಿದೆ ಮಾಹಿತಿ

  • ಕೂರ್ಗ್, ಕರ್ನಾಟಕ | Coorg, Karnataka. (Best Places to visit in South India)

best places to visit in South India

READ ALSO

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

ಕರ್ನಾಟಕದಲ್ಲಿ ಕೂರ್ಗ್‌ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು 900 ಮೀಟರಿನಿಂದ 1715 ಮೀಟರು ಎತ್ತರಕ್ಕಿದೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ದಕ್ಣಿಣ ಭಾರತದಲ್ಲೇ ಇದು ತುಂಬಾ ಜನಪ್ರಿಯ ವಾರದ ರಜಾ ಕಳೆಯುವ ತಾಣ ಕೂಡ ಹೌದು. ವಿಶೇಷವಾಗಿ ಕರ್ನಾಟಕದ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನವರಿಗೆ ಮತ್ತು ಕೇರಳದ ಕಣ್ಣೂರು, ವಯನಾಡು ಜಿಲ್ಲೆಗಳ ಜನರಿಗೆ ಇದು ತುಂಬಾ ಅಚ್ಚುಮೆಚ್ಚಿನ ತಾಣ. ಕೊಡಗು, ಒಂದು ಅತ್ಯುತ್ತಮವಾದ ಹಳೆಯ ನಗರದ ಮೆರುಗನ್ನು ಹೊಂದಿದೆ. ಕೊಡಗಿಗೆ ಹೋಗುವ ಪ್ರವಾಸಿಗರು ಪ್ರಶಾಂತವಾದ ಮತ್ತು ರಿಲ್ಯಾಕ್ಸ್‌ ಆದ ಅನುಭವವನ್ನು ನೀಡುತ್ತದೆ ಮತ್ತು ಸುತ್ತಮುತ್ತಲಿನ ಪರಿಸರದಿಂದಾಗಿ ನಿಧಾನವಾದ ಜೀವನ ಸಾಗುವಿಕೆಯನ್ನು ಅನುಭವಕ್ಕೆ ತರುತ್ತದೆ. ಪಶ್ಚಿಮ ಘಟ್ಟಗಳ ಪಶ್ಚಿಮ ಮತ್ತು ಪೂರ್ವ ಭಾಗದ ಗುಡ್ಡಗಳ ಇಳಿಜಾರುಗಳ ಅದ್ಭುತ ರಮ್ಯ ನೋಟವು ನಮಗೆ ಇಲ್ಲಿ ಸಿಗುತ್ತದೆ. (Best Places to visit in South India)

  • ಊಟಿ | Ooty

best places to visit in South India

ನೀಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಊಟಿಯನ್ನು ‘ಉದಕಮಂಡಲಂ’ ಎಂದೂ ಕೂಡ ಕರೆಯುತ್ತಾರೆ. ಇದು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಭಾರತದ ಪ್ರವಾಸೋದ್ಯಮದಲ್ಲಿ ಊಟಿ ತನ್ನದೇ ಆದ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

ಬೆಟ್ಟಗಳ ರಾಣಿಯು ಒಂದು ಸುಂದರವಾದ ವಿಹಾರ ಸ್ಥಳವಾಗಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ, ಚಹಾ ತೋಟಗಳು, ಜಲಪಾತಗಳು, ಆಕರ್ಷಕ ವಸಾಹತುಶಾಹಿ ವಾಸ್ತುಶಿಲ್ಪಗಳು ಪರಿಪೂರ್ಣವಾದ ವಿಶ್ರಾಂತಿಗೆ ಇದು ಸೂಕ್ತವಾದ ಸ್ಥಳವಾಗಿದೆ. (Best Places to visit in South India)

  • ಮೈಸೂರು ,ಕರ್ನಾಟಕ | Mysore, Karnataka.

best places to visit in South India

ಮೈಸೂರು ಎಂಬ ಪದವು, ಇದು ” ಮಹಿಶುರ್ ” ಅಥವಾ ” ಮಹಿಷಾಸುರನ ಊರು ” ಪದದಿಂದ ಬಂದಿದೆ. ಮೈಸೂರು ಎಂಬ ಪದವನ್ನು ಕೇಳಿದಾಗ ಮೊದಲು ನೆನಪಿಗೆ ಬರುವುದು ಭವ್ಯವಾದ ಮೈಸೂರು ಅರಮನೆ. ಕರ್ನಾಟಕದ ಈ ಪಾರಂಪರಿಕ ನಗರವು ತನ್ನ ಭವ್ಯವಾದ ಅರಮನೆಗಳು, ಶ್ರೀಗಂಧ ಮತ್ತು ರೇಷ್ಮೆಗೆ ಹೆಸರುವಾಸಿಯಾಗಿದೆ, ಆದರೆ ಮೈಸೂರು ಅರಮನೆಯ ಸೌಂದರ್ಯ ಮತ್ತು ವೈಭವವು ಅದನ್ನು ಎದ್ದು ಕಾಣುವಂತೆ ಮಾಡುತ್ತದೆ.

ಮೈಸೂರಿನ ಸೌಂದರ್ಯವು ಭವ್ಯವಾದ ಅರಮನೆಗಳು ಮತ್ತು ಇತರ ಭವ್ಯವಾದ ಕಟ್ಟಡಗಳಿಗೆ ಸೀಮಿತವಾಗಿದೆ ಎಂದು ನೀವು ಭಾವಿಸಿದರೆ, ನೀವು ಬಹುಶಃ ಬೃಂದಾವನ ಉದ್ಯಾನವನಗಳು, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟಗಳು ಅಥವಾ ಕಾರಂಜಿ ಸರೋವರದ ಬಗ್ಗೆ ಕೇಳಿಲ್ಲ. ಕೆಲವು ವಿಸ್ತಾರವಾದ ಉದ್ಯಾನಗಳು ಮತ್ತು ಕೆಲವು ಅದ್ಭುತವಾದ ಜಲಪಾತಗಳು ಮತ್ತು ಸರೋವರಗಳು ಸೇರಿದಂತೆ ಈ ಅದ್ಭುತ ಸ್ಥಳಗಳು ಮೈಸೂರನ್ನು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡುತ್ತದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೂ ಕರೆಯಲ್ಪಡುವ ಮೈಸೂರು ಅನೇಕ ಶ್ರೀಮಂತ ಮತ್ತು ರಾಜಮನೆತನದ ಅರಮನೆಗಳಿಗೆ ನೆಲೆಯಾಗಿದೆ. (Best Places to visit in South India)

  • ಗೋಕರ್ಣ | Gokarna, Karnataka

best places to visit in South India

ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ಗೋಕರ್ಣ, ಒಂದು ಅದ್ಭುತವಾದ ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ ಪ್ರವಾಸಿ ಸ್ಥಳವೂ ಹೌದು.

ಉತ್ತರ ಕನ್ನಡ ಜಿಲ್ಲೆಯ, ಅರಬ್ಬಿ ಸಮುದ್ರ ತೀರದಲ್ಲಿ ನೆಲೆಸಿರುವ, ಹಲವಾರು ನಯಮನ ಮನೋಹರ ಕಡಲ ತೀರಗಳಿಗೆ ಆಶ್ರಯವಾಗಿರುವ ಗೋಕರ್ಣದ ಹಿನ್ನೆಲೆಯೂ ಸಹ ಸಾಕಷ್ಟು ರೋಚಕವಾಗಿದ್ದು ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ. ಅನೇಕ ಪೌರಾಣಿಕ ಪ್ರಸಂಗಗಳಿಗೆ ಸಾಕ್ಷಿಯಾಗಿದೆ ಈ ಗೋಕರ್ಣ. (Best Places to visit in South India)

ಇದನ್ನೂ ಓದಿ  : ಬೀದರ್ ಕೋಟೆ | ಐತಿಹಾಸಿಕ ಪರಂಪರೆಯ ಬೀದರ್

  • ಪಾಂಡಿಚೆರಿ | Pondicherry

best places to visit in South India

ತನ್ನದೇ ಹೆಸರಿನ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಪಾಂಡಿಚೆರಿ 2006 ದ ವರೆಗೆ ಪುದುಚೆರಿ ಎಂದು ಕರೆಯಿಸಿಕೊಳ್ಳುತ್ತಿತ್ತು. ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶಗಳೆರಡು ಪ್ರೆಂಚ್ ಸಂಸ್ಕೃತಿ ಹಾಗೂ ಸಂಪ್ರದಾಯದ ಬಹಳ ಪ್ರಭಾವಕ್ಕೆ ಒಳಗಾಗಿ ಇಂದಿಗೂ ಆ ಪ್ರಭಾವವನ್ನು ತನ್ನಲ್ಲಿ ಉಳಿಸಿಕೊಂಡಿದೆ. ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶವು ನಾಲ್ಕು ಪ್ರಾಂತ್ಯಗಳನ್ನು ಹೊಂದಿದ್ದು ಯಾಣಮ್ (ಆಂಧ್ರ ಪ್ರದೇಶ), ಪಾಂಡಿಚೆರಿ ನಗರ, ಕಾರೈಕಾಲ್ (ಎರಡೂ ತಮಿಳುನಾಡಿನ ದಡದಲ್ಲಿದೆ) ಹಾಗೂ ಮಾಹೆ (ಕೇರಳದ ಪಶ್ಚಿಮ ಕಡಲ ತೀರದಲ್ಲಿದೆ) ಹರಡಿದೆ.

ಬಂಗಾಳ ಕೊಲ್ಲಿಯ ಕೋರಮಂಡಲ ತೀರದಲ್ಲಿ ಇರುವ ಪಾಂಡಿಚೆರಿ ಚೆನ್ನೈಯಿಂದ 162 ಕಿ.ಮೀ ದೂರದಲ್ಲಿದೆ. ಇದು ಪ್ರೆಂಚರ ಅಧೀನದಲ್ಲಿದ್ದು 1670 ರಿಂದ 1954 ರ ತನಕ್ ಪ್ರೆಂಚ್ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿ ಫ್ರೆಂಚರು ಸುಮಾರು ಮೂರು ಶತಮಾನಗಳ ಕಾಲ ಆಡಳಿತ ನಡೆಸಿ ತಮ್ಮ ಸಂಸ್ಕೃತಿಯ ಗುರುತನ್ನು ಬಿಟ್ಟು ಹೋಗಿದ್ದಾರೆ. (Best Places to visit in South India)

  • ಕೊಡೈಕೆನಾಲ್ | Kodaikanal, Tamil Nadu

best places to visit in South India

ತಮಿಳುನಾಡು ರಾಜ್ಯದಲ್ಲಿ ನೆಲೆಗೊಂಡಿರುವ ಕೊಡೈಕೆನಾಲ್ ಭಾರತದ ಅತ್ಯಂತ ಪ್ರಸಿದ್ಧ ಮಧುಚಂದ್ರ ತಾಣಗಳಲ್ಲಿ ಒಂದಾಗಿದೆ. ಕೊಡೈಕನಾಲ್ ಬಗ್ಗೆ ನೀವು ಯೋಚಿಸುವಾಗ, ನೀವು ಅದ್ಭುತ ವಾತಾವರಣ, ಮಂಜಿನಿಂದ ಆವೃತವಾದ ಬಂಡೆಗಳು, ಮೋಡದಿಂದ ಆವೃತವಾದ ಪರ್ವತಗಳು ಮತ್ತು ಸುಂದರವಾದ ಸರೋವರಗಳು ಮತ್ತು ಕಣಿವೆಗಳ ಬಗ್ಗೆ ಯೋಚಿಸಿರುತ್ತೀರಿ. ಆದರೆ ಒಮ್ಮೆ ನೀವು ಈ ಗಿರಿಧಾಮಕ್ಕೆ ಭೇಟಿ ನೀಡಿದಾಗ, ನೀವು ಏನೆಲ್ಲಾ ಊಹಿಸಿದ್ದಿರೋ ಅದೆಲ್ಲವೂ ನಿಜವೆಂದು ನಿಮಗನಿಸುತ್ತದೆ. (Best Places to visit in South India)

  • ವರ್ಕಲಾ | Varkala, Kerala. (Best Places to visit in South India)

best places to visit in South India

ವರ್ಕಲಾವು ಒಂದು ಪ್ರಶಾಂತವಾದ ಮತ್ತು ನಿಶಬ್ದತೆಯಿಂದ ಕೂಡಿರುವ ಸಣ್ಣ ಹಳ್ಳಿಯಾಗಿದ್ದು, ಇದು ತಿರುವನಂತಪುರಂ ಜಿಲ್ಲೆಯ ಹೊರ ವಲಯದಲ್ಲಿ ಇರುವ ಪ್ರದೇಶವಾಗಿದೆ. ಇದು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು ಅದರಲ್ಲಿ ಸುಂದರವಾದ ಒಂದು ಬೀಚ್, 2000 ವರ್ಷಗಳಷ್ಟು ಹಳೆಯ ವಿಷ್ಣು ದೇವಸ್ಥಾನ ಮತ್ತು ಬೀಚ್‌ನಿಂದ ಸ್ವಲ್ಪವೇ ದೂರದಲ್ಲಿ ಇರುವ ಶಿವಗಿರಿ ಮಠ – ಆಶ್ರಮಮ್ ಸೇರಿವೆ.

ಪಾಪನಾಶಮ್ ಬೀಚ್ (ವರ್ಕಲಾ ಬೀಚ್ ಎಂದು ಕರೆಯಲ್ಪಡುತ್ತದೆ), ಇದು ವರ್ಕಲಾದಿಂದ ಹತ್ತು ಕಿಲೋ ಮೀಟರ್‌ಗಳಷ್ಟು ದೂರದಲ್ಲಿದ್ದು, ನೈಸರ್ಗಿಕ ನೀರಿನ ಚಿಲುಮೆ ಎಂದು ಜನಪ್ರಿಯವಾಗಿದೆ. ಇದನ್ನು ಔಷಧೀಯ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಈ ಬೀಚ್‌ನ ಪವಿತ್ರವಾದ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದರೆ ದೇಹದಲ್ಲಿನ ಎಲ್ಲಾ ಅಶುದ್ಧತೆಗಳನ್ನು ಮತ್ತು ಎಲ್ಲಾ ಪಾಪಗಳ ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗುತ್ತದೆ; ಇದರಿಂದ ಇದಕ್ಕೆ ’ಪಾಪನಾಸನಮ್ ಬೀಚ್’ ಎಂದು ಕರೆಯಲಾಗುತ್ತದೆ. (Best Places to visit in South India)

  • ತಿರುಪತಿ | Tirupati – Andhra Pradesh

best places to visit in South India

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದ ಏಳನೇ ಬೆಟ್ಟದ ಮೇಲಿರುವ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯವಾಗಿದೆ. ಆದರೆ ಇಲ್ಲಿಗೆ ಬಂದ ನಂತರ ವೈಕುಂಠದಂತಹ ಭಾವನೆ ಬರುವುದು ಬಹಳ ನಿಗೂಢ. ಇಲ್ಲಿನ ಗಾಳಿಯಲ್ಲಿ ವಿಭಿನ್ನ ಭಾವನೆ ಇದೆ. ದೇವರು ನಿಮ್ಮ ಸುತ್ತಲೂ ಇದ್ದಾನೆ ಎಂದು ಎಲ್ಲೆಡೆ ಭಾಸವಾಗುತ್ತದೆ. ದೇವಾಲಯದಲ್ಲಿ ಸ್ಥಾಪಿಸಲಾದ ವೆಂಕಟೇಶ್ವರ ಸ್ವಾಮಿಯು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಈ ಕಾರಣದಿಂದಲೇ ತಿರುಮಲದ ಏಳು ಬೆಟ್ಟಗಳಿಗೂ ವಿಷ್ಣುವಿನ ಏಳು ತಲೆಗಳೆಂಬ ಬಿರುದು ಬಂದಿದೆ. ಇದಲ್ಲದೆ, ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹ ಮತ್ತು ಸುತ್ತಲೂ ನಡೆಯುವ ಅದ್ಭುತ ಘಟನೆಗಳಿಂದಾಗಿ, ಈ ಸ್ಥಳವನ್ನು ಭೂಮಿಯ ಮೇಲಿನ ವೈಕುಂಠ ಎಂದೂ ಕರೆಯುತ್ತಾರೆ.

Tags: Best Places to visit in South India

Related Posts

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!
Main Story

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

September 25, 2024
ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್
Featured

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

September 25, 2024
ದೇಶ

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ :

November 9, 2022
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
Featured

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

September 25, 2024
ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort
Featured

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort
Featured

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024
Next Post
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು...

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ಕೋವಿಡ್ ಗೆ ರಷ್ಯಾದಲ್ಲಿ ಮೊದಲ ಲಸಿಕೆ ಸಿದ್ಧವಾಗಿರುವುದು ವಿಶ್ವಕ್ಕೆ ಸಂತಸದ ಸುದ್ದಿ- ಡಾ.ಕೆ.ಸುಧಾಕರ್

August 14, 2020
ವಿವೇಕಾನಂದರ ಭಾಷಣಕ್ಕೆ ಇಂದಿಗೆ 127 ವರ್ಷ. ಆ ಮಾತಿಗೆ ಯಾಕಿಷ್ಟು ಮಹತ್ವ?

ವಿವೇಕಾನಂದರ ಭಾಷಣಕ್ಕೆ ಇಂದಿಗೆ 127 ವರ್ಷ. ಆ ಮಾತಿಗೆ ಯಾಕಿಷ್ಟು ಮಹತ್ವ?

September 25, 2024

ಸಾವು ಯಾರಿಗೆ,ಹೇಗೆ,ಯಾವಾಗ ಬರುತ್ತದೆ ಗೊತ್ತಿಲ್ಲ-ಕೊರೋನಾಗೆ ಹೆದರಿ ಮನೆಯಲ್ಲಿರುವ ಜಾಯಮಾನ ನನ್ನದಲ್ಲ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

August 14, 2020
ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

September 25, 2024

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.