ನವದೆಹಲಿ: ದೇಶೀ ವಿಮಾನಯಾನಕ್ಕೆ ಈಗಾಗಲೇ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೂ ಅನುಮತಿ ಸಿಗಲಿದೆ ಎಂಬ ಊಹೆಗೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯದ ಆದೇಶ ಹೊರಬಿದ್ದಿದ್ದು, ಸೆಪ್ಟೆಂಬರ್ 30ರವರೆಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಮೂಲಕ ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿರುವ ನಿರ್ಬಂಧವನ್ನು ವಿಸ್ತರಣೆ ಮಾಡಿದ್ದು, ವಿಶೇಷ ಸಂದರ್ಭದಲ್ಲಿ ಈಗಾಗಲೇ ನಿಗದಿಯಾಗಿರುವ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡುವುದಾಗಿ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ ಹೇಳಿದೆ.
ಕಮರ್ಷಿಯಲ್ ವಿಮಾನಗಳ ಮೇಲಿನ ನಿರ್ಬಂಧ ಮಾತ್ರ ಮುಂದುವರಿದಿದ್ದು, ಸರಕು ಸಾಗಣೆಯ ವಿಮಾನಗಳಿಗೆ ಈ ಆದೇಶ ಅನ್ವಯವಾಗದು.