ಬೆಂಗಳೂರು: ಮೊದಲೇ ಉಸಿರು ಕಟ್ಟುತ್ತಿದ್ದ ವಾತಾವರಣದಲ್ಲಿ ಮಾಸ್ಕ್ ಧರಿಸಿ ಕಷ್ಟಪಟ್ಟು ಉಸಿರಾಡುತ್ತಿದ್ದ ಬೆಂಗಳೂರಿನ ಜನರಿಗೆ ಮಾಸ್ಕ್‌ನಿಂದ ಕೊಂಚ ರಿಲೀಫ್ ದೊರಕಿದೆ. ಬೆಂಗಳೂರಿನಲ್ಲಿ ಏಕಾಂಗಿ ಪ್ರಯಾಣ ಮಾಡುವವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಬಿಬಿಎಂಪಿ ಹೇಳಿದೆ.
ಇದುವರೆಗೆ ಬೆಂಗಳೂರಿನಲ್ಲಿ ಎಲ್ಲಿಯೇ ಓಡಾಟ ಮಾಡಬೇಕೆಂದರೂ ಮಾಸ್ಕ್ ಧರಿಸಿಯೇ ಹೋಗಬೇಕು. ಇಲ್ಲವೆಂದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಈಗ ನಿಯಮವನ್ನು ಕೊಂಚ ಸಡಿಲಿಸಿರುವ ಬಿಬಿಎಂಪಿ, ಏಕಾಂಗಿಯಾಗಿ ಕಾರಿನಲ್ಲಿ ಅಥವಾ ಬೈಕ್‌ನಲ್ಲಿ ಸಂಚರಿಸುವವರಿಗೆ ಮಾಸ್ಕನ ಅವಶ್ಯಕತೆಯಿಲ್ಲ. ಆದರೆ ಇನ್ನೊರ್ವರ ಜತೆ ಪರಯಾಣಿಸುವುದಾದರೆ ಮಾತ್ರ ಮಾಸ್ಕ್ ಕಡ್ಡಾಯ ಎಂದು ಹೇಳಿದೆ. ಒಂದು ವೇಳೆ ಏಕಾಂಗಿಯಾಗಿ ಪ್ರಯಾಣಿಸಿ ನಂತರದಲ್ಲಿ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದಾದರೂ ಮಾಸ್ಕ್ ಕಡ್ಡಾಯ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.