ಮಧ್ಯಪ್ರದೇಶ. ಜ.4: ಮಧ್ಯಪ್ರದೇಶದ ರೇವಾದಲ್ಲಿನ ಮಿಲಿಟರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಇಶಾಂತ್ ಎಂಬುವವರ ಪತ್ನಿ ಹಾಗೂ ಮಗು ಮಹಾರಾಷ್ಟ್ರದ ತುಮ್ಸಾನ್ ರೈಲು ನಿಲ್ದಾಣದ ಹತ್ತಿರ ಹೆಣವಾಗಿ ಪತ್ತೆಯಾಗಿದ್ದಾರೆ.ಆದರೆ ಅವರು ಮೃತರಾದ ರೀತಿ ಮಾತ್ರ ನಿಜಕ್ಕೂ ಧಾರುಣವಾಗಿದೆ..
ತಮ್ಮ ಮಗುವಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳು ಇಂತಹದ್ದೊಂದು ದಾರುಣ ಅಂತ್ಯವನ್ನು ನಿರೀಕ್ಷಿಸಿರಲಿಲ್ಲ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿದ್ದಾರೆ. ತಾಯಿ ಪೂಜಾ(27) ಹಾಗೂ 18 ತಿಂಗಳ ಮಗು ತಾಯಿ ಶೌಚಾಲಯಕ್ಕೆ ಹೋಗಿ ಮರಳಿ ಹಲವು ಸಮಯವಾದರೂ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡಿದ್ದ ಪತಿ ಗೊಂಡಾ ರೈಲು ನಿಲ್ದಾಣದಲ್ಲಿ ದೂರು ದಾಖಲಿಸಿದ್ದರು. ಈ ದಂಪತಿ ಮಧ್ಯಪ್ರದೇಶದಲ್ಲಿನ ರೇವಾದಿಂದ ನಾಗ್ಪುರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ವೈಗಂಗಾ ನದಿ ಸೇತುವೆಯ ಹತ್ತಿರ ಮಹಿಳೆಯೊಬ್ಬರ ಶವ ಸಿಕ್ಕಿತ್ತು. ಹುಡುಕಾಟ ತೀವ್ರಗೊಳಿಸಿದಾಗ ನದಿಯಲ್ಲಿ ತಾಯಿ ಹಾಗೂ ಮಗು ಇಬ್ಬರ ಶವ ಕೂಡಾ ಪತ್ತೆಯಾಗಿತ್ತು. ಪ್ರಾಥಮಿಕ ವರದಿಯ ಪ್ರಕಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಮಗು ರೈಲಿನ ಶೌಚಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಮಗು ಆಯ ತಪ್ಪಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ಹೋಗಿ ಮಹಿಳೆಯೂ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಆದರೂ ಈ ಸಾವು ಹಲವು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಗು ಹಾಗೂ ತಾಯಿ ರೈಲಿನಿಂದ ಹೊರಗೆ ಬಿದ್ದರೂ ಅಲ್ಲಿದ್ದವರಿಗೆ ಹೇಗೆ ಗೊತ್ತಾಗಲಿಲ್ಲ? ಈ ಸಾವು ಆಕಸ್ಮಿಕವೋ? ಆತ್ಮಹತ್ಯೆಯೋ? ಅಥವಾ ಇದರ ಹಿಂದೆ ಬೇರೆಯವರ ಕೈವಾಡವಿದೆಯೋ? ಎಂಬ ಕುರಿತು ತನಿಖೆ ನಡೆಯುತ್ತಿದೆ