Thursday, April 24, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home Blog

ಮೈಸೂರಿನಲ್ಲಿ ಮನೆ ಬಾಗಿಲಿಗೆ ಲಸಿಕೆ..ಶಾಸಕ ರಾಮದಾಸ್ ವಿಶಿಷ್ಟ ಪ್ರಯತ್ನ..

News Desk by News Desk
June 20, 2021
in Blog
0
0
SHARES
0
VIEWS
Share on FacebookShare on Twitter

ಮೈಸೂರು:

mysore MLA Ramdas

ಇಂದು ಬೆಳಗ್ಗೆ ಮೈಸೂರು ನಗರದ ಜೆ.ಪಿ.ನಗರದಲ್ಲಿ ಇರುವ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ , ಆರೋಗ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಾಯೋಗದೊಂದಿಗೆ ಏಕಕಾಲದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬರುವ 270 ಬೂತ್ ಗಳಲ್ಲಿ ಟೋಟಲ್ ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ರೆಜಿಸ್ಟ್ರೇಷನ್ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಎಸ್.ಟಿ.ಸೋಮಶೇಖರ್ ರವರು ನೆರವೇರಸಿದರು . ಮುಖ್ಯ ಅತಿಥಿಯಾಗಿ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ರವರು ಹಾಜರಿದ್ದರು.

READ ALSO

ಮಾರ್ಚ್ 22ರಂದು ‘ಕರ್ನಾಟಕ ಬಂದ್

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಇಡೀ ದೇಶದಲ್ಲಿಯೇ ಇಂತಹ ಅಭಿಯಾನ ನಡೆದಿಲ್ಲ ಕೆ.ಆರ್ ಕ್ಷೇತ್ರದಲ್ಲಿ ಬರುವ 270 ಬೂತ್ ಗಳಲ್ಲಿ, 100 ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ಕೆ.ಆರ್ ಕ್ಷೇತ್ರವನ್ನ ಕೊರೊನಾ ಮುಕ್ತ ಮಾಡಬೇಕೆಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ದೇಶದಲ್ಲಿ ಕೋವಿಡ್ ಪಾಸಿಟಿವಿಟಿ 5 ಕ್ಕಿಂತಾ ಕಡಿಮೆ ಇದ್ದಾಗ ಮೈಸೂರಿನಲ್ಲಿ 15 ಕ್ಕಿಂತಾ ಹೆಚ್ಚಿದೆ ಎಂದಾಗ ಆತಂಕವಾಗಿತ್ತು. ಇದಕ್ಕಾಗಿಯೇ ನಮ್ಮ ಕಚೇರಿಯಲ್ಲಿ ಪಾಲಿಕಾ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳೊಡನೆ ಚರ್ಚಿಸಿ ಈ ರೀತಿಯ ಅಭಿಯಾನ ಮಾಡಬೇಕು ಎಂದು ನಿರ್ಧಾರ ಮಾಡಿದೆವು. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಅಂದು ಪ್ರಧಾನಿ ಮೋದಿಯವರ ಆಶಯದಂತೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿಸಿದ್ದಾರೆ, 16 ಮತ್ತು 17 ನೆ ತಾರೀಖಿನಂದು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರು ಅಂದೇ ಲಸಿಕೆಗೆ ರಿಜಿಸ್ಟರ್ ಮಾಡಿರುತ್ತಾರೆ 21 ನೆ ತಾರೀಖಿನಿಂದ ಅದದೇ ಬೂತ್ ಗಳಲ್ಲಿ ಅವರುಗಳಿಗೆ ಲಸಿಕೆ ನೀಡಲಾಗುತ್ತದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ರಿಸಲ್ಟ್ ಬೇಗ ಕೊಡುವುದಕ್ಕೋಸ್ಕರ ನಾವು ಬೇರೆ ಜಿಲ್ಲೆಗಳಿಗೆ ಕೋವಿಡ್ ಸ್ವ್ಯಾಬ್ ಗಳನ್ನು ಕಳಿಸಲಿದ್ದೇವೆ. ಜುಲೈ 01 ವೈದ್ಯರ ದಿನದ ಮೊದಲು ಮೈಸೂರನ್ನ ಕೋವಿಡ್ ಮುಕ್ತ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ, ಈ ಸಮಯದಲ್ಲಿ ನಾನು ನಗರಪಾಲಿಕಾ ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಶಿಕ್ಷಕರಿಗೆ, ಪಕ್ಷದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. ಕೊನೆಯ ವ್ಯಕ್ತಿ ಟೆಸ್ಟಿಂಗ್ ಮುಗಿಯುವವರೆಗೂ ಸಹ ಅಭಿಯಾನ ನಡೆಯುತ್ತದೆ ಎಂದರು.

ನಂತರ ಮಾತನಾಡಿದ ಮಾನ್ಯ ರಾಜ್ಯ ಸಹಕಾರಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಟಿ ಸೋಮಶೇಖರ್ ಅವರು ನಾನು ಮೈಸೂರಿಗೆ ಬಂದಾಗಿನಿಂದಲೂ ಸಹ ನೋಡುತ್ತಿದ್ದೇನೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ರಾಮದಾಸ್ ಅವರು ಮಾಡುತ್ತಿದ್ದಾರೆ,ಅವರು ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮಾಡುತ್ತಾರೆ.‌
ಜಿಲ್ಲಾಡಳಿತ ಕೂಡಾ ಕೋವಿಡ್ 19 ನ್ನು ನಿಯಂತ್ರಣ ಮಾಡುವ ಕೆಲಸಗಳಿಗೆ ಚಾಲನೆ ನೀಡಿದೆ. ಒಂದು ಪೈಲಟ್ ಪ್ರಾಜೆಕ್ಟ್ ಆಗಿ ಮಾನ್ಯ ರಾಮದಾಸ್ ಅವರು ಈ ಅಭಿಯಾನವನ್ನು ಕೈಗೊಂಡಿದ್ದಾರೆ,ಕೊರೊನಾ ಮುಕ್ತ ಮೈಸೂರು ಮಾಡುವತ್ತ ರಾಮದಾಸ್ ಅವರ ಕಾರ್ಯ ಶ್ಲಾಘನೀಯ ಸರ್ಕಾರದ ಸಚಿವನಾಗಿ, ಉಸ್ತುವಾರಿ ಸಚಿವನಾಗಿ ರಾಮದಾಸ್ ಅವರಿಗೆ ಅಭಿನಂದನೆಯನ್ನ ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಅವರು ಮಾತನಾಡಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ಆನ್ ಲಾಕ್ ಆಗದಂತಹ 11 ಜಿಲ್ಲೆಗಳ ಪಟ್ಟಿಯ್ಲಲಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾ ಸಚಿವರು ಹೆಚ್ಚಿನ RTPCR ಟೆಸ್ಟ್ ನಡೆಸಬೇಕು ಎಂದು ಸೂಚಿಸಿದ್ದರು, ಅದೇ ರೀತಿ ಕ್ರಮವನ್ನು ನಾವು ಕೈಗೊಂಡಿದ್ದೇವೆ. ಮಾನ್ಯ ಶಾಸಕರು ವಿಶೇಷವಾಗಿ ಇಡೀ ಯೋಜನೆಯನ್ನು ರೂಪಿಸಿ ನಮಗೆ ಕ್ರೆಡಿಟ್ ಕೊಡುತ್ತಿದ್ದಾರೆ ಆದರೆ ಇದರ ಸೂತ್ರಧಾರ ರಾಮದಾಸ್ ಅವರೇ ಆಗಿದ್ದಾರೆ. ಇದನ್ನ ನಾವು ಮೈಸೂರು ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕೆ ಆರ್ ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ ಇದರ ಬಗ್ಗೆ ಚರ್ಚಿಸಿ ಸಾಧಕ ಬಾಧಕಗಳನ್ನ ನೋಡಿಕೊಂಡು ನಂತರ ಇಡೀ ಮೈಸೂರಿಗೆ ವಿಸ್ತರಿಸುತ್ತೇವೆ ಎಂದರು.

ಸಾಮಾಜಿಕ ಭದ್ರತೆ ಯೋಜನೆಯ ಆದೇಶದ ಪತ್ರವನ್ನು ಸಾಂಕೇತಿಕವಾಗಿ 5 ಜನರಿಗೆ ನೀಡಿ ಮುಂದಿನ ದಿನಗಳಲ್ಲಿ ಅವರ ಮನೆ ಬಾಗಿಲಿಗೆ ಆದೇಶದ ಪ್ರತಿಯನ್ನು ತಲುಪಿಸುವ ಕಾರ್ಯಕ್ಕೆ
ಹಾಗೂ ಮಹಿಳಾ ದಿನಚರಣೆಯ ಅಂಗವಾಗಿ ಮಾನ್ಯ ಶಾಸಕರ ನೇತೃತ್ವದಲ್ಲಿ ಗೃಹ ಕಛೇರಿಯಲ್ಲಿ ಕಣ್ಣಿನ ತಪಾಸಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಅಂದು ಒಟ್ಟು 234 ಜನರಿಗೆ ಕನ್ನಡಕ ಮತ್ತು 37 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಬಗ್ಗೆ ವೈದರು ಸೂಚಿಸಿದ ಹಿನ್ನಲೆಯಲ್ಲಿ ಮಾನ್ಯ ಶಾಸಕರು ಉಚಿತವಾಗಿ ಒಟ್ಟು 234 ಕನ್ನಡಕವನ್ನು ನೀಡುತ್ತಿದ್ದು ಆದರೆ ಕೋವೀಡ್ ನಿಯಮ ಜಾರಿಯಲ್ಲಿರುವುದರಿಂದ 5 ಜನರಿಗೆ ಕನ್ನಡಕ ಹಾಗೂ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ಅನುಮತಿ ಪತ್ರವನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ ಹಾಗೂ ಉಳಿದ ಕನ್ನಡಕವನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ನಗರಪಾಲಿಕಾ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ ನಡೆಸಿಕೊಟ್ಟರು.

ಸದರಿ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಉಪ ವಿಭಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿ.ಎಚ್.ಒ ಡಾ.ಟಿ.ಅಮರ್ ನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು, ಡಿಸಿಪಿ ಗೀತಾ ಪ್ರಸನ್ನ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ , ಕೆ.ಆರ್ ಪೊಲೀಸ್ Acp ಪೂರ್ಣಚಂದ್ರ ತೇಜಸ್ವಿ, ಸ್ಥಳೀಯ ನಗರ ಪಾಲಿಕಾ ಸದಸ್ಯರು. ಭಾಜಪಾ ನಗರಾಧ್ಯಕ್ಷರಾದ ಶ್ರೀ ವತ್ಸ, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಮುಖಂಡರಾದ ಸಂತೋಷ್ ಶಂಭು, ಜೆ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್, ಹೇಮಂತ್ ಕುಮಾರ್, ದೇವರಾಜೇ ಗೌಡರು, ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಸೇರಿದಂತೆ ಇತರರು ಹಾಜರಿದ್ದರು.

Related Posts

ಮಾರ್ಚ್ 22ರಂದು ‘ಕರ್ನಾಟಕ ಬಂದ್
Blog

ಮಾರ್ಚ್ 22ರಂದು ‘ಕರ್ನಾಟಕ ಬಂದ್

March 1, 2025
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
Blog

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024
ದಿಢೀರ್ ತುರ್ತು ನಿಯಮಗಳನ್ನು ಹಿಂಪಡೆದ ಶ್ರೀಲಂಕಾ…!
Blog

ದಿಢೀರ್ ತುರ್ತು ನಿಯಮಗಳನ್ನು ಹಿಂಪಡೆದ ಶ್ರೀಲಂಕಾ…!

September 25, 2024
ಜೋ ಬಿಡೆನ್ ಅವರ ಮೊಮ್ಮಗಳು ತನಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ! ವೈಟ್ ಹೌಸ್ ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ.
Blog

ಜೋ ಬಿಡೆನ್ ಅವರ ಮೊಮ್ಮಗಳು ತನಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ! ವೈಟ್ ಹೌಸ್ ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ.

September 25, 2024
ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್? ಏನಿದು ಕಲರ್ ಕೋಡ್ ಲಾಕ್ ಡೌನ್…
Blog

ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್? ಏನಿದು ಕಲರ್ ಕೋಡ್ ಲಾಕ್ ಡೌನ್…

September 25, 2024
ship
Blog

ಮಾರಿಷಸ್‌ ಹಡಗು ದುರಂತ: ಭಾರತ ಮೂಲದ ಕ್ಯಾಪ್ಟನ್‌ ಬಂಧನ

August 19, 2020
Next Post

 ಸ್ವದೇಶಕ್ಕೆ ಮರಳಿದಳು ಸೌದಿಯಲ್ಲಿ ಸಿಲುಕಿದ್ದ ಮಹಿಳೆ

Leave a Reply Cancel reply

Your email address will not be published. Required fields are marked *

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರವಾಗಬೇಕಿರುವುದು ಅವಶ್ಯ: ರಾಜನಾಥ್ ಸಿಂಗ್ ಅಭಿಮತ!

August 13, 2020

ಕೇರಳದಲ್ಲಿ ಬಂತು ಮೊದಲ ತುರ್ತು ಚಿಕಿತ್ಸಾ ಬೋಟ್‌

August 27, 2020
shwetha singh

ಸುಶಾಂತ್‌ ಸಿಂಗ್‌‌ ಹೆಸರಿಗೆ ಕ್ಯಾಲಿಫೋರ್ನಿಯಾದಿಂದ ಗುರುತಿಸುವಿಕೆಯ ಪ್ರಮಾಣಪತ್ರ

August 15, 2020
waterfall

ಗಾಳಿಯಲ್ಲಿ ಹಾರಿದ ಜಲಪಾತ

August 14, 2020

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.