ದಿನೇ ದಿನೇ ಕೊರೊನಾ ಮೂರನೇ ಅಲೆಯ ಹಾವಳಿ ಹೆಚ್ಚಾಗಿದ್ದು ಸದ್ಯ ದೇಶದಲ್ಲಿ ಒಮಿಕ್ರಾನ್ ಪ್ರಭೇದದಿಂದಾಗಿ ಬಿಕ್ಕಟ್ಟು ಅಪ್ಪಳಿಸಬಹುದು ಎಂದು ಖಾಸಗಿ ಅಧ್ಯಯನವೊಂದು ಹೇಳಿದೆ.
ಮತ್ತೆ ದೇಶಾದ್ಯಂತ ಕರೊನಾ ಭೀತಿ ಅತಿಯಾಗಿದ್ದು, ಸದ್ಯದಲ್ಲೇ ದಿನಕ್ಕೆ ಸುಮಾರು 60 ಸಾವಿರ ಮಂದಿ ಸೋಂಕಿತರಾಗಿ ಆಸ್ಪತ್ರೆಗೆ ಸೇರಲಿದ್ದಾರೆ ಎಂಬ ಅಧ್ಯಯನವೊಂದರ ಅಂಶ ಮತ್ತಷ್ಟು ಆತಂಕವನ್ನು ಮೂಡಿಸಿದೆ.
ಒಂದೆಡೆ ಸರ್ಕಾರಗಳು ಲಾಕ್ ಡೌನ್ ಮಾಡುವ ಯೋಚನೆಯಲ್ಲಿದ್ದರೆ ಇನ್ನೊಂದೆಡೆ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿಸುತ್ತಿವೆ..
ದೇಶದಲ್ಲಿ ಒಮಿಕ್ರಾನ್ ಅಲೆ ಗರಿಷ್ಠ ಮಟ್ಟ ತಲುಪುವ ವೇಳೆ ದೈನಿಕ ಸುಮಾರು 60,000 ಜನರು ಆಸ್ಪತ್ರೆಗಳಿಗೆ ದಾಖಲಾಗಬಹುದು.
ಈ ನಡುವೆ ಮಹಾರಾಷ್ಟ್ರದಲ್ಲಿ ಈಗಾಗಲೇ ಪರಿಸ್ಥಿತಿ ಬಿಗಡಾಯಿಸಿದ್ದು ಮುಂಬೈನ ಶಾಲೆಗಳಿಗೆ ಈ ತಿಂಗಳಿಡೀ ರಜೆ ಘೋಷಿಸಲಾಗಿದೆ. ಮುಂಬೈನಲ್ಲಿ 1ರಿಂದ 9ನೇ ತರಗತಿವರೆಗೆ ಜ. 31ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು, 10-12ನೇ ತರಗತಿಗಳು ಎಂದಿನಂತೆಯೇ ನಡೆಯಲಿವೆ ಎಂದು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ತಿಳಿಸಿದೆ.