ಕೊರೋನಾ ಭಯದಲ್ಲಿ ತತ್ತರಿಸಿದ್ದ ಜಗತ್ತು ಈಗಷ್ಟೆ ಸುಧಾರಿಸಿಕೊಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಓಮಿಕ್ರಾನ್ ಭೀತಿ ಆವರಿಸಿದೆ. ಇದರ ನಡುವೆ ಕೊರೋನಾ ಗೆಲ್ಲಲು ಜಗತ್ತು ತಯಾರಾಗಿದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಕೂಡ ಪೋಷಕರಲ್ಲಿ ಆತಂಕ ಮಾತ್ರ ಇನ್ನೂ ಹಾಗೆಯೇ ಇದೆ ಮತ್ತೆ. ಈಗ ಸರ್ಕಾರ ಆ ಆತಂಕಕ್ಕೆ tere ಎಳೆಯಲು ಹೊರಟಿದೆ.
ನಿಮ್ಮ ಮಕ್ಕಳು 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಚಿಂತೆ ಬಿಡಿ.. ಅವರಿಗೆ ಲಸಿಕೆ ನೀಡಲು ಸರ್ಕಾರ ಈಗ ನಿರ್ಧಾರಿಸಿದೆ. ಈಗ 15-18 ವಯಸ್ಸಿನವರು ಎಲ್ಲರೂ ಸಹ ಕೋವಿನ್ ಆಯಪ್ ನಲ್ಲಿ ಲಸಿಕೆಗಾಗಿ ನೋಂದಾಯಿಸಲು ಸಾಧ್ಯವಿದೆ.
ಮಕ್ಕಳು ಲಸಿಕೆಗಾಗಿ ಅನುಕೂಲಕರ ನೋಂದಣಿ ಮೋಡ್ ನಲ್ಲಿ ವೆರಿಫೈಯರ್ /ಲಸಿಕೆದಾರರಿಂದ ಆನ್ ಸೈಟ್ ನಲ್ಲಿ ನೋಂದಾಯಿಸಬಹುದು. ಇದರಲ್ಲಿ ಅಪಾಯಿಂಟ್ಮೆಂಟ್ ಗಳನ್ನು ಆನ್ ಲೈನ್ ಅಥವಾ ಆನ್ ಸೈಟ್ ನಲ್ಲಿ ಕಾಯ್ದಿರಿಸಬಹುದಾಗಿದೆ. ಅದರೊಂದಿಗೆ ವಾಕ್ ಇನ್ ಮೂಲಕವೂ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಗಾಗಿ ನೋಂದಣಿ ಮಾಡಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಇನ್ನು ಎರಡನೇ ಡೋಸ್ ಗೆ ಸಮಯದ ಮಧ್ಯಂತರವನ್ನ 28 ದಿನಗಳ ಸಮಯದ ಮಧ್ಯಂತರವನ್ನು ನಿಗದಿಪಡಿಸಲಾಗಿದೆ.