ದೇಶದಲ್ಲಿ ದಿನೇ ದಿನೇ ಓಮಿಕ್ರಾನ್ ವೈರಸ್ ಸೇರಿದಂತೆ ಕೊರೋನ ( Coronavirus ) ಅಬ್ಬರ ಕೂಡ ಹೆಚ್ಚಾಗಿದೆ. ಇದಕ್ಕಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ಕಠಿಣ ನಿಯಮ ಮತ್ತು ಲಾಕ್ ಡೌನ್ ಜಾರಿ ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಆದರೆ ಈ ಬಾರಿಯ ಲಾಕ್ ಡೌನ್ ಈ ಹಿಂದಿನ ಲಾಕ್ ಡೌನ್ ನಂತೆ ಇರದೇ ವ್ಯತೀರಿಕ್ತವಾಗಿರಲಿದೆ.
ಏನಿದು ಕಲರ್ ಲಾಕ್ ಡೌನ್?
ಸರ್ಕಾರಕ್ಕೆ ಕಲರ್ ಕೋಡ್ ನಂತೆ ಲಾಕ್ ಡೌನ್ ಮಾಡಲು ಪ್ರಸ್ತಾವನೆ ಸಲ್ಲಿಸಿದೆ ತಾಂತ್ರಿಕ ಸಲಹಾ ಸಮಿತಿ. ಇದರೊಂದಿಗೆ ಐಸಿಯು ಬೆಡ್ ಗಳ ಸಂಖ್ಯೆ ಹೆಚ್ಚಳ ಮಾಡಲು ಮತ್ತು ಬೆಡ್ ಗಳ ಸಂಖ್ಯೆ ಶೇ.40ರಷ್ಟು ಭರ್ತಿಯಾದ್ರೇ ಲಾಕ್ ಡೌನ್ ಮಾಡುವಂತೆ ಸೂಚನೆ ಕೂಡ ನೀಡಿದೆ. ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಈ ಪ್ರಸ್ತಾವನೆ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ತಿಳಿದುಕೊಳ್ಳಲು ಜ.7ಕ್ಕೂ ಮುನ್ನಾ ನೈಟ್ ಕರ್ಪ್ಯೂ ಮುಗಿಯುವ ವರೆಗೆ ಕಾಯಲೇ ಬೇಕು.. ರಾತ್ರಿ ಕರ್ಫ್ಯೂ ಮುಗಿಯೋ ಮೊದಲು ಸೇರುವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳೋ ನಿರೀಕ್ಷೆಯಿದೆ. ಅದಕ್ಕಾಗಿ ನಾವು ಕಾದು ನೋಡಲೇಬೇಕಿದೆ.
ಈ ಕುರಿತು ಮಾಹಿತಿಯನ್ನು ನೀಡಿದಂ ಕಂದಾಯ ಸಚಿವ ಆರ್ ಅಶೋಕ್ ಅವರು ಮಾಹಿತಿಯನ್ನು ನೀಡಿದಂತೆ “ಸರ್ಕಾರಕ್ಕೆ ರಾಜ್ಯದ ಜನತೆಯ ಹಿತದೃಷ್ಠಿಯಿಂದ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕೊರೋನಾ ಪಾಸಿಟಿವಿಟಿ ದರವನ್ನು ಆಧರಿಸಿ ಕಲರ್ ಕೋಡಿಂಗ್ ಜೋನ್ ಗಳನ್ನು ನಿರ್ಮಿಸುವಂತೆಯೂ ಸಮಿತಿ ಪ್ರಸ್ತಾವನೆ ಸಲ್ಲಿಸಿರೋದಾಗಿ ತಿಳಿಸಿದ್ದಾರೆ.