ಜೈಪುರ: ರೆಬೆಲ್ ನಾಯಕ ಸಚಿನ್ ಪೈಲಟ್ ಅವರ ಬಂಡಾಯದಿಂದ ಅತಂತ್ರ ಸ್ಥಿತಿಗೆ ತಲುಪಿದ್ದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕೊನೆಗೂ ವಿಶ್ವಾಸಮತ ಪಡೆದಿದ್ದು, ಸದ್ಯಕ್ಕೆ ನಿರಾಳವಾಗಿದೆ.
ಶುಕ್ರವಾರ ನಡೆದ ರಾಜಸ್ಥಾನದ ವಿಶೇಷ ಅಧಿವೇಶನದಲ್ಲಿ ಸಿಎಂ ಅಶೋಕ್ ಗೆಹ್ಲೂಟ್ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದ್ದು, ಈ ವಿಶ್ವಾಸ ಮತಯಾಚನೆಯಲ್ಲಿ ಶಾಸಕರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಲ್ ಅವರು ಸರ್ಕಾರದ ಪರ ವಿಶ್ವಾಸ ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕುತಂತ್ರ ಮಾಡುತ್ತಿದೆ. ರಾಜಸ್ಥಾನವನ್ನು ಸೋಲಿಸಲು ಬಂದ ರಾಜ ಅಕ್ಪರ್ ಮೇವಾಡದ ಮುಗ್ಗರಿಸಿದ್ದ ಎಂದರು.
ಬಳಿಕ ಮಾತನಾಡಿದ ಸಿಎಂ ಅಶೋಕ್ ಗೆಹ್ಲೂಟ್ , ಜನ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ಸರ್ಕಾರ ರಚನೆ ಮಾಡಿದೆ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
125 ಮತ
ಇನ್ನು ವಿಶ್ವಾಸ ಮತಯಾಚನೆಯಲ್ಲಿ ಒಟ್ಟು 200 ಸದಸ್ಯ ಬಲದ ಪೈಕಿ 125 ಶಾಸಕರು ಗೆಹ್ಲೂಟ್ ಪರ ಮತ ಚಲಾಯಿಸಿದರು.
ರಾಜಸ್ಥಾನ ವಿಧಾನಸಭೆ: ಸಂಖ್ಯಾ ಬಲ (200)
ಆಡಳಿತರೂಢ ಪಕ್ಷ
ಕಾಂಗ್ರೆಸ್ -107 (ಪೈಲಟ್ ಬೆಂಬಲಿಗರು-19, ಬಿಎಸ್‌ಪಿ- 6)
ಆರ್‌ಎಲ್‌ಡಿ -1
ಸ್ವತಂತ್ರರು- 13
ಬಿಟಿಪಿ-2
ಎಡಪಕ್ಷ- 2
ಒಟ್ಟು- 125
ವಿರೋಧಪಕ್ಷ
ಬಿಜೆಪಿ-72
ಆರ್‌ಎಲ್‌ಪಿ-3