ನವದೆಹಲಿ: ಕೊರೋನಾ ವೈರಸ್‌ಗೆ ಅನೇಕ ಔಷಧಗಳು ಈಗಾಗಲೇ ಮಾರುಕಟ್ಟೆಗೆ ಬರಲು ತಯಾರಿ ನಡೆಸಿವೆ. ಆದರೆ ಟ್ರಯಲ್ ಹಂತದಲ್ಲಿರುವ ಔಷಧಗಳು ಮಾರುಕಟ್ಟೆಗೆ ಬರಲು ಮಾತ್ರ ಅನೇಕ ಅಡಚಣೆಗಳನ್ನು ಎದುರಿಸುತ್ತಿವೆ. ಏತನ್ಮಧ್ಯೆ ಕೇವಲ ನಲವತ್ತೆರಡು ದಿನಗಳಲ್ಲಿ ಔ಼ಷಧ ಸಿದ್ಧವಾಗಲಿದೆ ಎಂದು ಬ್ರಿಟನ್‌ನ ಆಕ್ಸ್‌ಫರ್ಢ್ ವಿಶ್ವವಿದ್ಯಾನಿಲಯ ತಿಳಿಸಿದೆ.
ಆಕ್ಸ್‌ಫರ್ಡ್ ಯೂನಿವರ್ಸಿಟಿ ಹಾಗೂ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಲಸಿಕೆಯನ್ನು ಸಿದ್ಧಪಡಿಸುತ್ತಿದ್ದು, ಲಸಿಕೆಯ ಪ್ರಯೋಗ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಅಂತಿಮ ಹಂತದ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆ ಬ್ರಿಟನ್‌ನ ಜನತೆಗೆ ಕೇವಲ ೪೨ ದಿನಗಳಲ್ಲಿ ಈ ಲಸಿಕೆ ಲಭ್ಯವಾಗಲಿದೆ. ಕ್ರಿಸ್‌ಮಸ್‌ಗಿಂತ ಮುಂಚೆಯೇ ಲಸಿಕೆ ಎಲ್ಲರ ಬಳಕೆಗೆ ಸಿದ್ಧವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಆಕ್ಸ್‌ಫರ್ಡ್‌ನ ಸಂಶೋಧಕರು ತಿಳಿಸಿದ್ದಾರೆ.
ಇದರ ನಡುವೆಯೇ ಭಾರತದಲ್ಲಿ ಸಹ ಕೋವ್ಯಾಕ್ಸಿನ್ ಸಿದ್ಧತೆ ಭರದಿಂದ ಸಾಗಿದ್ದು, ರಷ್ಯಾ ಸೇರಿ ಎಲ್ಲಡೆ ಸಂಶೋಧನೆಗಳು ಚಾಲ್ತಿಯಲ್ಲಿವೆ. ಸದ್ಯ ಎಲ್ಲವೂ ಪ್ರಯೋಗ ಹಂತದಲ್ಲಿರುವುದರಿಂದ ಯಾವ ಲಸಿಕೆ ಮೊದಲು ಬರಲಿದೆ ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.