ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿನ ಹಟಿಬಂಧ ಉಪಜಿಲಾ ಜಿಲ್ಲೆಯಲ್ಲಿನ ಗೆಂಡುಕುರಿ ಎಂಬ ಹಳ್ಳಿಯಲ್ಲಿ ಹಿಂದೂ ದೇವಾಲಯದ ಎದುರು ಗೋಮಾಂಸ ನೇತು ಹಾಕಿ ದುಷ್ಕೃತ್ಯ ಮೆರೆದಿದ್ದಾರೆ ದುಷ್ಕರ್ಮಿಗಳು.
ಪಾಪಿಗಳು ಕೋಮು ಸೌಹಾರ್ದ ಕದಡಲು ಹಿಂದೂ ದೇವಾಲಯದ ಎದುರು ಗೋಮಾಂಸ ನೇತು ಹಾಕಿ ದುಷ್ಕೃತ್ಯ ಮೆರೆದಿದ್ದಾರೆ.
ಅಲ್ಲಿನ ಮೂರು ಹಿಂದೂ ದೇವಾಲಯದಲ್ಲಿ ದುಷ್ಕರ್ಮಿಗಳು ಹಸಿ ಗೋಮಾಂಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಆ ಚೀಲವನ್ನು ದೇವಾಲಯದ ಎದುರು ತೂಗು ಹಾಕಿದ್ದಾರೆ. ಈ ಪ್ರಕರಣದ ಬಳಿಕ ಅಲ್ಲಿನ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ಸಲ್ಲಿಸಿದ್ದಾರೆ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತಂತೆ ನಾಲ್ಕು ಪ್ರಕರಣಗಳು ದಾಖಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದವರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉಪಜಿಲಾ ಪೂಜಾ ಪರಿಷತ್ತಿನ ಅಧ್ಯಕ್ಷ ದಿಲೀಪ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ಕೂಡಾ ನಡೆದಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವು ಶಂಕಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಕೊನೆಗೂ ಹಲವು ಶಂಕಿತರನ್ನು ಬಂಧಿಸಿ ಕಂಬಿಯ ಹಿಂದೆ ನೂಕಿದ್ದಾರೆ.
ಊರಿನ ಜನ ಕಾನೂನು ಹೋರಾಟದೊಂದಿಗೆ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲು ದೇವರ ಪ್ರಾರ್ಥನೆಯನ್ನೂ ಮಾಡಿದ್ದಾರೆ.